ರಾಯಚೂರು: ಈ ತರಬೇತಿಯನ್ನು ಎಲ್ಲರೂ ತುಂಬಾ ಗಂಭೀರವಾಗಿ ತೆಗೆದುಕೊಳ್ಳಿ ಯಾವುದೇ ಗೊಂದಲಗಳಿದ್ದರೂ ತರಬೇತಿಯಲ್ಲಿ ಉತ್ತರ ಕಂಡುಕೊಳ್ಳಿ. ಕೊರೋನ ೩ನೇ ಅಲೆಯ ನಿಯಂತ್ರಣಕ್ಕಾಗಿ ಕಾಂಟ್ಯಾಕ್ಟ್ ಟ್ರ್ಯಾಕಿಂಗ್ ಆಪ್ ಅನ್ನು ಎಲ್ಲರೂ ಡೌನ್ಲೋಡ್ ಮಾಡಿಕೊಳ್ಳಿ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಜಿಲ್ಲಾಧಿಕಾರಿಗಳಾದ ಅವಿನಾಶ್ ಮೆನನ್ ಅವರು ಅಧಿಕಾರಿಗಳಿಗೆ ಆದೇಶ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರಸಭೆ ಸಿಬ್ಬಂದಿಗಳು, ಬಿಲ್ ಕಲೆಕಟರ್, ವಿವಿಧೋದ್ದೇಶ ಕಾರ್ಯಕರ್ತರು, ತಾಲೂಕಿನ ಪುರಸಭೆ ಸಿಬ್ಬಂದಿಗಳು, ಹಾಗೂ ಸಿ.ಆರ್.ಪಿ. ಸಿಬ್ಬಂದಿಗಳು, ಗ್ರಾಮ ಲೆಕ್ಕಿಗರು, ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಕೋವಿಡ್-೧೯ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮವಾಗಿ ರಾಯಚೂರು ಜಿಲ್ಲೆಯಲ್ಲಿ ಕೋವಿಡ್-೧೯ ದೃಢಪಟ್ಟ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪಕಿತರನ್ನು ಪತ್ತೆಹಚ್ಚಲು ಹಾಗೂ ಸಂರ್ಪಕಿತರನ್ನು ಮಾಹಿತಿಯನ್ನು ಹ್ಯಾಪ್ ಗಳ ಮುಖಾಂತರ ನಿಯಂತ್ರಣ ಕಾರ್ಯಕ್ಕೆ ತರಬೇತಿ ಕಾರ್ಯಾಗಾರದಲ್ಲಿ ನಡೆಯಿತು.
ಈ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿಗಳು ಪ್ರಾಥಮಿಕ ಕಾಂಟ್ಯಾಕ್ಟ್ ಟ್ರ್ಯಾಕ್ ಮಾಡಿ ಟೆಸ್ಟಿಂಗ್ ಮಾಡಿ ತಂಡ ರಚಿಸಿಕೊಂಡು ಎಲ್ಲರೂ ಕೋವಿಡ್ ಮಹಾಮಾರಿ ತಡೆಗಟ್ಟಲು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆಗೊಳಿಸಲು ಪ್ರಯತ್ನಿಸಿ ಯಾವುದೇ ಕರ್ತವ್ಯ ವಿಳಂಬ ಮಾಡಬೇಡಿ ಇದರಿಂದ ಸಾರ್ವಜನಿಕರ ಜೀವನ ಅಸ್ತವ್ಯಸ್ತ ಗೊಳ್ಳಲಿದೆ ಎಂದು ಎಚ್ಚರಿಸಿದರು .
ಕೊರೋನಾ ಸಂಖ್ಯೆ ಹೆಚ್ಚಳದಿಂದ ಲಾಕ್‌ಡೌನ್ ಘೋಷಣೆಯಾದರೆ ತುಂಬಾ ಸಮಸ್ಯೆ ಆಗುವುದರಿಂದ ಮುಂಜಾಗೃತ ವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಆದ್ದರಿಂದ ಈ ಕಾರ್ಯಗಾರವನ್ನು ಸಮರ್ಪಕವಾಗಿ ಬಳಸಿಕೊಂಡು ಮಹಾಮಾರಿ ನಿಯಂತ್ರಣದಲ್ಲಿ ತಂಡಗಳನ್ನು ಕಟ್ಟಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಿ. ಎರಡನೆ ಅಲೆಯಲ್ಲಿ ಪಾಸಿಟಿವ್ ದರ ಶೇಕಡ ೨೦ರಷ್ಟು ಇತ್ತು ಆದರೆ ಮೂರನೇ ಅಲೆಯಲ್ಲಿ ಇದರ ಪರಿಸ್ಥಿತಿ ತುಂಬಾ ಗಂಭೀರ ಗೊಳ್ಳಲಿದೆ ಎಲ್ಲರೂ ಎಚ್ಚೆತ್ತುಕೊಂಡು ಮೂರನೇ ಅಲೆಯನ್ನು ಬಾರದಂತೆ ಟ್ರಾಕಿಂಗ್ ಆಪ್ ಅನ್ನು ಬಳಸಿ ಅದನ್ನು ಮುಂದುವರೆಯದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರ್ಗೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತರಬೇತಿಯಲ್ಲಿ ಉಪಸ್ಥಿತರಿದ್ದರು.