ಪ್ರತ್ಯೇಕ ಜಿಲ್ಲಾ ವಿರೋಧಿಸುವ ಭರದಲ್ಲಿ, ಸೋಲಿನ ಹತಾಶೆಯಿಂದ ವಿ.ಪ ಮಾಜಿ ಸದಸ್ಯ ಅರುಣ ಶಹಾಪುರ ಬೆಂಕಿ ಹಚ್ಚು ಶಬ್ದ ಬಳಕೆ ಮಾಡಿದ್ದು ಖಂಡನೀಯ..!
ಇಂಡಿ : ಇಂಡಿ ಪ್ರತ್ಯೇಕ ಜಿಲ್ಲಾ ಹೋರಾಟ ವಿರೋಧಿಸುವ ಭರದಲ್ಲಿ ಮತ್ತು ಸೋಲಿನ ಹತಾಶೆಯಿಂದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂಬ ಪದವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಉಪಯೋಗಿಸಿದನ್ನು ಖಂಡಿಸುತ್ತೆನೆ. ಬೆಂಕಿ ಹಚ್ಚುವ ಶಬ್ದ ಕೂಡಲೇ ಹಿಂಪಡೆಯಬೇಕು ಎಂದು ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್ ಕಾಮಗೊಂಡ ಶುಕ್ರವಾರ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಖಾಸಗಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತಾನಾಡಿದ ಅವರು, ಪ್ರತ್ಯೇಕ ಜಿಲ್ಲಾ ಮಾಡುವುದು ಭೀಮಾ ನದಿ ತೀರದ ಸಮಗ್ರ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ. ಇನ್ನೂ ಈ ಭಾಗದ ಜನಸಾಮಾನ್ಯರ ಕನಸ್ಸಾಗಿದೆ. ಆದರೆ ಸೋಲಿನ ಹತಾಶೆಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಬೆಂಕಿ ಹಚ್ಚುವ ಕೆಲಸಕ್ಕಾಗಿ, ಸ್ವಾರ್ಥಕ್ಕಾಗಿ, ಅನುಕೂಲಕ್ಕಾಗಿ ಪ್ರತ್ಯೇಕ ಜಿಲ್ಲೆ ಮಾಡುತ್ತಿದ್ದಾರೆ ಎಂಬ ಹೇಳಿಕೆ ನೀಡಿರುವುದು ಸೂಕ್ತವಲ್ಲ .! ಜಿಲ್ಲೆಯ ಕೂಗು ಉಪವಿಭಾಗದ ವ್ಯಾಪ್ತಿಯ ಸಿಂದಗಿ, ಚಡಚಣ, ದೇವರಹಿಪ್ಪರಗಿ, ಆಲಮೇಲ ಹಾಗೂ ಇಂಡಿ ತಾಲ್ಲೂಕಿನ ಪ್ರತಿಯೊಬ್ಬರ ಧ್ವನಿ ಮತ್ತು ನಾಡಿಮಿಡಿತವಾಗಿದೆ. ಅದನ್ನು ಬಿಟ್ಟು, ಬೆಂಕಿ ಹಚ್ಚುವ ಶಬ್ದ ಉಪಯೋಗಿಸಿ ರಾಜಕೀಯ ಬಣ್ಣ ಲೇಪನ ಮಾಡುತ್ತೀರುವುದು ಖಂಡಿಸುತ್ತೆನೆ ಎಂದು ಹೇಳಿದರು.