ಬೆಂಗಳೂರು: ಸಾಮಾನ್ಯ ಮನುಷ್ಯ ಸಚಿವನಾಗಿದ್ದಕ್ಕೆ ಶಾಸಕ ಎಂಬಿ ಪಾಟೀಲ್ ಅವರಿಗೆ ಹೊಟ್ಟೆ ಉರಿ ಆಗುತ್ತಿದೆ. ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ
ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾರಜೋಳ ನಾಲಾಯಕ್ ಎಂದ ಮಾಜಿ ಸಚಿವ
ಎಂಬಿ ಪಾಟೀಲ್ ಹೇಳಿದ್ದಾರೆ. ಮಾತಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ನಿಮ್ಮ ಬಬಲೇಶ್ವರ ಕ್ಷೇತ್ರದ ಮೂಲ ನಿವಾಸಿಯಾಗಿದ್ದು, ನನ್ನ ಬಗ್ಗೆ ಮಾತಾಡುವಾಗ ಬಹಳ ಎಚ್ಚರದಿಂದಿರಿ. ಬಹುಷಃ ಅವರಿಗೆ ನನ್ನ ಮೇಲೆ ಏನೋ ಹೊಟ್ಟೆ ಉರಿ ಇದೆ ಎಂದರು. ವಿಜಯಪುರ ಜಿಲ್ಲೆಯಲ್ಲಿ ಅವರು ಒಬ್ಬರೇ ಜಲಸಂಪನ್ಮೂಲ ಸಚಿವರು ಆಗಿದ್ದರು ಅನಿಸುತ್ತದೆ. ಈಗ ನಾನೂ ಜಲಸಂಪನ್ಮೂಲ ಸಚಿವನಾಗಿದ್ದೇನೆ ಎಂದು ಗೋವಿಂದ ಕಾರಜೋಳ
ವ್ಯಂಗ್ಯವಾಡಿದರು.