ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ವಿಧಿವಶವಾದ ವಿನೋದ್ ರವರಿಗೆ ಶ್ರದ್ಧಾಂಜಲಿ ಸಭೆ
ಹನೂರು : ಪತ್ರಕರ್ತನಾದವನಿಗೆ ಕ್ರಿಯಾಶೀಲತೆ ಮತ್ತು ಧೈರ್ಯ ಮುಖ್ಯ ಅಂತಹ ಗುಣ ಯುವ ಪತ್ರಕರ್ತರಾದ ವಿನೋದ್ ರವರಲ್ಲಿ ಇತ್ತು ಅಲ್ಲದೆ ಅವರ ಸಾವು ನಮಗೆ ಅತೀವ ನೋವು ತಂದಿದೆ ಎಂದು ಹಿರಿಯ ವಕೀಲರಾದ ಎಸ್ ನಾಗರಾಜು ತಿಳಿಸಿದರು.
ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಇತ್ತೀಚಿಗೆ ಅಪಘಾತದಲ್ಲಿ ಮೃತರಾದ ವಿನೋದ್ ರವರ ಶ್ರಧ್ದಾಂಜಲಿ ಸಲ್ಲಿಸಿ ಮಾತನಾಡಿದ ವಕೀಲರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ,ಇವರು ನಮ್ಮ ಭಾಗದ ಹಲವಾರು ವಿಷಯಗಳಲ್ಲಿ ಸೂಕ್ಷ್ಮ ತೆಯನ್ನು ಅರಿತು ವರದಿ ಮಾಡುತ್ತಿದ್ದರು. ಅವರ ಅಗಲಿಕೆ ನಮಗೆ ತೀವ್ರ ನೋವು ತಂದಿದೆ ಆ ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ರೈತ ಸಂಘದ ಅಧ್ಯಕ್ಷರಾದ ಚಂಗಡಿ ಕರಿಯಪ್ಪ ಮಾತನಾಡಿ ವಿನೋದ್ ಒಬ್ಬ ಪತ್ರಕರ್ತ ಮಾತ್ತವಲ್ಲದೆ ಹಿತೈಷಿಯಾಗಿದ್ದರು. ಅವರ ವರದಿಗಾರಿಕೆಯು ನಮಗೆ ಮುಂದಿನ ಹೋರಾಟಗಳಿಗೆ ಸ್ಪೂರ್ತಿ ಯಾಗಿತ್ತು. ಅವರ ನಿಧನದಿಂದ ನಮ್ಮ ರೈತ ಸಮುದಾಯಕ್ಕೆ ತುಂಬಲಾರದ ನಷ್ಟ ವಾಗಿದೆ ಎನ್ನ ಬಹುದು ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ವಿನೋದ್ ರವರ ಸಾವು ನಮಗೆ ನುಂಗಲಾರದ ತುತ್ತಾಗಿದೆ ಅವರ ಪ್ರತಿಯೊಂದು ವರದಿಯು ನಮಗೆ ಮಾದರಿಯಾಗಿತ್ತು ,ಪ್ರತಿಯೊಂದು ಅಧಿಕಾರಿ ವರ್ಗ,ಸಂಘ ಸಂಸ್ಥೆಗಳ ಜೊತೆಯಲ್ಲಿ ಉತ್ತಮ ಒಡನಾಟ ಹೊಂದಿದ್ದರು ಭಗವಂತ ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.
ಹನೂರು ಪಟ್ಟಣದ ಕ್ರಿಸ್ಥರಾಜ ಸಂಸ್ಥೆಯ ವ್ಯವಸ್ಥಾಪಕ ಪಾದರ್ ರೋಶನ್ ಬಾಬು ರವರು ವಿಧಿವಶವಾದ ಪತ್ರಕರ್ತ ವಿನೋದ್ ರವರಿಗೆ ಸಂತಾಪ ಸೂಚಿಸಿದರು.
ಈ ಸಮಯದಲ್ಲಿ , ರೈತ ಸಂಘದ ಅಧ್ಯಕ್ಷರಾದ ಅಮ್ಜಾದ್ ಖಾನ್ ,ಪಟ್ಟಣ ಪಂಚಾಯತಿ ಸದಸ್ಯರುಗಳಾದ ಮಹೇಶ್ ನಾಯ್ಕ,ಸಂಪತ್ತು ಕುಮಾರ್ ,ಪೋಲಿಸ್ ಅಧಿಕಾರಿಗಳಾದ ಪಿ ಎಸ್ ಐ ಅಶ್ವಥ್ ,ಹಾಗೂ ರಾಘವೆಂದ್ರ,ಹಿರಿಯ ಪತ್ರಕರ್ತ ಪುಟ್ಟಸ್ವಾಮಿ, ಮುಖಂಡರುಗಳಾದ ವೆಂಕಟೇಗೌಡ, ಗಂಗಣ್ಣ ನಟರಾಜೆಗೌಡ, ಮಂಜೇಶ್ ,ದಾಸೆಗೌಡ, ಇಮ್ರಾನ್ ಖಾನ್ ಹಾಗೂ ಕರ್ನಾಟಕ ಪತ್ರಕರ್ತ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
Reporter : Chetan L , TQ Hanuru Dist Chamarajanagar