ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ
• Voice Of Janata – ಇಂಡಿ
ಇಂಡಿ ಪ್ರತ್ಯೇಕ ಜಿಲ್ಲಾ ಕೂಗಿಗೆ ಮತ್ತೇ ಬಲಬರುವಂತೆ ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇಂಡಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಸಭೆ ಶನಿವಾರ ಪಟ್ಟಣದ ತಾಲೂಕು ತಳವಾರ ಪರಿವಾರ ಸಮಾಜ ಸೇವಾ ಸಮಿತಿ ಕಾರ್ಯಾಲಯದಲ್ಲಿ ಜರುಗಿತು.
ಭೀಮಣ್ಣ ಕವಲಗಿ (ಗೌರವಾಧ್ಯಕ್ಷ), ಜಟ್ಟೆಪ್ಪ ರವಳಿ (ಅಧ್ಯಕ್ಷ), ಇಲಿಯಾಸ ಬೊರಾಮಣಿ, ತಮ್ಮಣ್ಣ ಪೂಜಾರಿ, ಅಣ್ಣಪ್ಪ ಕಲ್ಲಣ್ಣ, ಹರಿಚಂದ್ರ ಪವಾರ, ರಮೇಶ ಕಲ್ಯಾಣಿ (ಉಪಾಧ್ಯಕ್ಷರು), ಪ್ರಶಾಂತ ಕಾಳೆ(ಪ್ರ,ಕಾರ್ಯದರ್ಶಿ), ಮೈಬೂಬ ಅರಬ, ಧರ್ಮರಾಜ ವಾಲಿಕಾರ, ನೀಲಕಂಠ ರೊಗಿ,ಯಮುನಾಜಿ ಸಾಳುಂಕೆ,ಸಿದ್ದು ಕಟ್ಟಿಮನಿ (ಕಾರ್ಯದರ್ಶಿಗಳು), ಸದಾಶಿವ ಪ್ಯಾಟಿ(ಖಜಾಂಚಿ), ಜಾವೇದ ಮೋಮಿನ, ಜಟ್ಟೆಪ್ಪ ಮರಡಿ, ಲಿಂಬಾಜಿ ರಾಠೋಡ, ಮಹೇಶ ಹೊನ್ನಬಿಂದಗಿ, ಸುಭಾಷ್ ಬಾಬರ, ಗಿರೀಶ ಚಾಂದಕೋಟೆ, ಸಿದ್ದಪ್ಪ ಮಾನೆ, ಹುಚ್ಚಪ್ಪ ತಳವಾರ, ಶಿವಯೋಗೆಪ್ಪ ಮಾಡ್ಯಾಳ, ಆಸೀಪ್ ಕಾರಬಾರಿ, ಸತೀಶ ಕುಂಬಾರ,ಧೂಳಪ್ಪ ನಾವೆ, ರುಕ್ಕುದ್ದಿನ ತದ್ದೇವಾಡಿ, ಶಿವಕುಮಾರ ಬಿಸನಾಳ, ರಾಜು ಪಡಗಾನೂರ, ಶ್ರೀಕಾಂತ ಕೂಡಿಗನೂರ, ಶೇಖರ ನಾಯಕ, ಎನ್.ಕೆ.ಪೂಜಾರಿ ಸದಸ್ಯರಾಗಿ ಅವಿರೋಧವಾಗಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಡಿ.26 ರಂದು ಪ್ರತಿಭಟನೆ:
ಇಂಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಇಂಡಿ ಜಿಲ್ಲಾ ಹೋರಾಟ ಸಮಿತಿ ಡಿ.26 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಯಲ್ಲಿ 2 ಅಧಿಕ ಜನರು ವಿವಿಧ ಗ್ರಾಮಗಳಿಂದ ಆಗಮಿಸಲಿದ್ದಾರೆ. ಪ್ರತಿ 15 ದಿನಕ್ಕೊಂದು ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಇಂಡಿ ಪ್ರತ್ಯೇಕ ಜಿಲ್ಲೆ ಆಗುವವರೆಗೂ ಹೋರಾಟ ತೀವ್ರಗೊಳ್ಳಲಿದೆ ಎಂದು ಇಂಡಿ ಹೋರಾಟ ಸಮಿತಿ ಅಧ್ಯಕ್ಷ ಜಟ್ಟೆಪ್ಪ ರವಳಿ ಸಭೆಯಲ್ಲಿ ಹೇಳಿದರು.