Voice Of Janata DesK Sports News
ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವೆ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಿಂದ ವಶಪಡಿಸಿಕೊಂಡಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ 78 ರನ್ ಗಳ ಜಯ ಸಾಧಿಸಿದೆ. 297 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 218 ರನ್ ಗಳಿಸಲಷ್ಟೇ ಶಕ್ತವಾಯಿತು. ಸರಣಿಯ ಮೊದಲ ಪಂದ್ಯವನ್ನು ಭಾರತ ಮತ್ತು ಎರಡನೇ ಏಕದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತ್ತು.
ಪಾರ್ಲ್ : ಇಲ್ಲಿನ ಬೋಲ್ಯಾಂಡ್ ಪಾರ್ಕ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಅಂತಿಮ ಏಕದಿನ ಸರಣಿಯ ಪಂದ್ಯದಲ್ಲಿ ಗೆಲುವಿಗೆ ಭಾರತ ತಂಡ 297 ರನ್ ಗುರಿ ನೀಡಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಇನ್ನಿಂಗ್ ಆರಂಭಿಸಿದ ರಜತ್ ಪಾಟಿದಾರ್ ಮತ್ತು ಸಾಯಿ ಸುದರ್ಶನ್ ಜೋಡಿ ನಿಧಾನವಾಗಿ ರನ್ ಕಲೆ ಹಾಕಿತು. 4.4 ಓವರ್ ನಲ್ಲಿ ಭಾರತ ತಂಡ 34 ರನ್ ಗಳಿಸಿದ್ದಾಗ 16 ಎಸೆತಗಳಲಿ 22 ರನ್ ಗಳಿಸಿದ್ದ ಪಾಟೀದಾರ್ ನಾಂದ್ರೆ ಬರ್ಗರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಕಟ್ಟುವ ಆಟವಾಡಿದರು. 114 ಎಸೆತ ಎದುರಿಸಿದ ಸಂಜು 6 ಬೌಂಡರಿ 3 ಸಿಕ್ಸರ್ ಸಹಿತ 108 ರನ್ ಗಳಿಸಿ ಶತಕ ದಾಖಲಿಸಿದರು. ಆ ಮೂಲಕ ಸಂಜು ಸ್ಯಾಮ್ಸನ್ ಅವರು ಚೊಚ್ಚಲ ಅಂತರರಾಷ್ಟ್ರೀಯ ಶತಕ ಸಿಡಿಸಿದರು.
ನಾಯಕ ಕೆಎಲ್ ರಾಹುಲ್ 21 ರನ್ ಗಳಿಗೆ ಔಟ್ ಆದರು. ತಿಲಕ್ ವರ್ಮ 52, ರಿಂಕು ಸಿಂಗ್ 38, ವಾಷಿಂಗ್ಟನ್ ಸುಂದರ್ 14, ಅರ್ಷದೀಪ್ ಸಿಂಗ್ ಔಟಾಗದೆ 7 ರನ್ ಗಳಿಸಿದರು. 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.