ಇಂಡಿ : ಬೈಕ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಹೋರ್ತಿ -ನಿಂಬಾಳ ಬಳಿ ನಡೆದಿದೆ. ಸಿಂದಗಿ ತಾಲ್ಲೂಕಿನ ಬಳಗಾನೂರ ಗ್ರಾಮದ ಸಿದ್ದರಾಮ ಕಂಬಾರ ಗಾಯಗೊಂಡಿರುವ ಬೈಕ್ ಸವಾರ. ಸುಕ್ಷೇತ್ರ ಹೋರ್ತಿ ಶ್ರೀರೇವಣಸಿದ್ದೇಶ್ವರ ಜಾತ್ರೆಗೆ ಹೋಗುವಾಗ ಅಪಘಾತ ಆಗಿದೆ. ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊರ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.