ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚೆರ್ಚಿಸಲು ಆಗ್ರಹ..!
ಇಂಡಿ : ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡುವಂತೆ ಇಂಡಿಯ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಇಂಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಬೀಕರ ಬರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಬೇಕು . ಅದಲ್ಲದೇ ಎಲ್ಲಾ ದೃಷ್ಟಿಯಲ್ಲೂ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ವಿಜಯಪುರ ಜಿಲ್ಲೆಯನ್ನು 371.J ಕಲಂನಡಿ ಸೇರಿಸಿಬೇಕು ಎಂದು ಮನವಿ ಮಾಡಿದರು.