ಪ್ರತಿಭಾ ಕಾರಂಜಿಯಲ್ಲಿ ಹಿರೇಮಸಳಿ ಎಮ್ ಪಿ ಎಸ್ ಶಾಲೆಯ ವಿಧ್ಯಾರ್ಥಿಗಳ ಸಾಧನೆ ಶ್ಲಾಘನೀಯ : ಅಧ್ಯಕ್ಷ ಪೀರಪ್ಪ ಭಾವಿಕಟ್ಟಿ..
ಇಂಡಿ : ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ವಿವಿಧ ಕ್ಷೇತ್ರದಲ್ಲಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಗಳಿಸಿ ಶಾಲೆಯ ಹೆಸರು ಮತ್ತು ನಮ್ಮೂರಿಗೆ ಕೀರ್ತಿ ತಂದಿದ್ದಕ್ಕೆ ಮಕ್ಕಳ ಹಾಗೂ ಶಿಕ್ಷಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಎಸ್ ಡಿ ಎಮ್ ಸಿ ಅಧ್ಯಕ್ಷ ಪೀರಪ್ಪ ಭಾವಿಕಟ್ಟಿ ಶ್ಲಾಘಿಸಿದರು.
ಇಂಡಿ ಪಟ್ಟಣದ ರಾಯಲ್ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತಾಲ್ಲೂಕಿನ ಹಿರೇಮಸಳಿ ಗ್ರಾಮದ ವಿಧ್ಯಾರ್ಥಿಗಳು ಭಾಗವಹಿಸಿವ ಸಾಧನೆಗೈದ ವಿಧ್ಯಾರ್ಥಿಗಳಿಗೆ ಎಸ್ ಡಿ ಎಮ್ ಸಿ ಅಧ್ಯಕ್ಷ ಅಭಿನಂದಿಸಿ ಮಾತಾನಾಡಿದರು.
ಚಿತ್ರಕಲೆ ಮತ್ತು ಬಣ್ಣ ಹಚ್ಚುವಿಕೆ ಸ್ಪರ್ಧೆಯಲ್ಲಿ ೭ ನೇ ತರಗತಿ ವಿಧ್ಯಾರ್ಥಿ ಪೂಜಾ ಕ್ಷತ್ರಿ, 4 ನೇ ವರ್ಗದ ಸಿಂಚನಾ ಪಟ್ಟಣಶೆಟ್ಟಿ, ಛದ್ಮವೇಶದಲ್ಲಿ ೭ನೇ ವರ್ಗದ ವಿದ್ಯಾರ್ಥಿ ವಿಶ್ವನಾಥ ಕನ್ನೊಳ್ಳಿ, ಧಾರ್ಮಿಕ ಪಠಣ (ಅರೆಬೇಕ್)ದಲ್ಲಿ ಅಪ್ಸನಾ ಕೊರಬು ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ತಂದಿದ್ದಾರೆ.
ಇನ್ನೂ ಕಿರಿಯರ ವಿಭಾಗದಲ್ಲಿ ಅತಿಫಾ ಸೌದಾಗರ್, ಕ್ಲೇ ಮಾಡಲಿಂಗ್ ವಿಭಾಗದಲ್ಲಿ ಶಿವಶಂಕರ ತಳವಾರ್ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಎಂ ಸಿ ಸರ್ವ ಸದಸ್ಯರು, ಶಾಲಾ ಮುಖ್ಯ ಗುರು ಆನಂದ ಕೆಂಭಾವಿ, ಸಹ ಶಿಕ್ಷಕ ಪ್ರಕಾಶ ಹೋಳಿನ್, ಬಿ ಸಿ ಸಂಗಮೇಶ, ಸಿ ಎಸ್ ಬೇಡಗೆ, ಬಿ ಕೆ ಪಟ್ಟಣಶೆಟ್ಟಿ, ಆರ್ ಟಿ ತಳವಾರ, ಡಿ ಜೆ ಮಾದನಶೆಟ್ಟಿ, ಪಿ ಆರ್ ಪಾಂಡ್ರಿ, ಬಿ ಜಿ ಅಡಳ್ಳಿ, ಡಿ ಎನ್ ಹರಿಜನ್, ಬಾಳು ಚವ್ಹಾಣ, ಮಹಾದೇವಿ ಗಿಣ್ಣಿ, ಪ್ರತಿಭಾ ಗಬಸಾವಳಗಿ, ಪ್ರೇಮಾ ಯರನಾಳ, ರಫೀಕ್ ಗೌರ್, ಎಚ್ ಆರ್ ನಾಟಿಕಾರ ಎಲ್ಲರೂ ಅಭಿನಂದಿಸಿದ್ದು, ಮುಂದೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.