Voice Of Janata DesK News
ಟಿ೨೦ ತೃತೀಯ ಪಂದ್ಯ ಯಾರ ಮಡಲಿಗೆ..? ಇಂದು
India vs Australia: ಇಂದು ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈಗಾಗಲೇ ಪ್ರವಾಸಿ ಆಸ್ಟ್ರೇಲಿಯಾ ಎದುರು ನಡೆಯುತ್ತಿರುವ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾ 2-0 ಅಂತರದ ಮುನ್ನಡೆ ಪಡೆದಿದೆ. ಇದೀಗ ಸರಣಿಯ ಮೂರನೇ ಪಂದ್ಯ ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಮಂಗಳವಾರ (ನವೆಂಬರ್ 28) ಸಾಯಂಕಾಲ 7 ಘಂಟೆಗೆ ಪಂದ್ಯ ನಡೆಯಲಿದೆ. ಸೂರ್ಯಕುಮಾರ್ ಯಾದವ್ ಸಾರಥ್ಯದ ಬಲಿಷ್ಠ ಭಾರತ ತಂಡ 3-0 ಅಂತರದಲ್ಲಿ ಟ್ರೋಫಿ ಗೆಲುವು ಖಾತ್ರಿ ಪಡಿಸಿಕೊಳ್ಳುವ ಉತ್ಸಾಹದಲ್ಲಿದೆ. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಸರಣಿಯಲ್ಲಿ ಜೀವಂತವಾಗಿ ಉಳಿಯಲು ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಅತ್ತ ಮಾಡು ಇಲ್ಲವೆ ಮಡಿ ಹೋರಾಟ ನಡೆಸಲು ಸಜ್ಜಾಗಿರುವ ಆಸ್ಟ್ರೇಲಿಯಾ ಕೂಡ ಎರಡು ಬದಲಾವಣೆಯೊಂದಿಗೆ ಆಡುವ ಸಾಧ್ಯತೆ ಇದೆ. ಮ್ಯಾಥ್ಯೂ ಶಾರ್ಟ್ ಸ್ಥಾನದಲ್ಲಿ ಸ್ಟಾರ್ ಓಪನರ್ ಟ್ರಾವಿಸ್ ಹೆಡ್ ಕಣಕ್ಕಿಳಿಯಬಹುದು. ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ತನ್ವೀರ್ ಸ್ಥಾನದಲ್ಲಿ ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಆಡುವ ಸಾಧ್ಯತೆ ಇದೆ.
ಟೀಮ್ ಇಂಡಿಯಾ
ಋತುರಾಜ್ ಗಾಯಕ್ವಾಡ್ (ಓಪನರ್) ಯಶಸ್ವಿ ಜೈಸ್ವಾಲ್ (ಓಪನರ್) ಇಶಾನ್ ಕಿಶನ್(ವಿಕೆಟ್‌ಕೀಪರ್/ ಬ್ಯಾಟ್ಸ್‌ಮನ್) ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್) ತಿಲಕ್ ವರ್ಮಾ/ ಶ್ರೇಯಸ್ ಅಯ್ಯರ್ (ಬ್ಯಾಟರ್) ರಿಂಕು ಸಿಂಗ್ (ಬ್ಯಾಟರ್) ಅಕ್ಷರ್ ಪಟೇಲ್ (ಆಲ್‌ರೌಂಡರ್) ರವಿ ಬಿಷ್ಣೋಯ್ (ಲೆಗ್ ಸ್ಪಿನ್ನರ್) ಅರ್ಷದೀಪ್ ಸಿಂಗ್ (ಎಡಗೈ ವೇಗಿ) ಮುಖೇಶ್ ಕುಮಾರ್ (ಬಲಗೈ ವೇಗಿ) ಪ್ರಸಿದ್ಧ್ ಕೃಷ್ಣ (ಬಲಗೈ ವೇಗಿ)
ಟೀಮ್ ಆಸ್ಟ್ರೇಲಿಯಾ
ಟ್ರಾವಿಸ್ ಹೆಡ್ (ಓಪನರ್),ಸ್ಟೀವ್ ಸ್ಮಿತ್ (ಓಪನರ್) ಜಾಶ್ ಇಂಗ್ಲಿಸ್ (ಬ್ಯಾಟರ್) ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್‌ರೌಂಡರ್) ಮಾರ್ಕಸ್ ಸ್ಟೊಯ್ನಿಸ್ (ಆಲ್‌ರೌಂಡರ್) ಟಿಮ್ ಡೇವಿಡ್ (ಆಲ್‌ರೌಂಡರ್), ಮ್ಯಾಥ್ಯೂ ವೇಡ್ (ಕ್ಯಾಪ್ಟನ್/ ವಿಕೆಟ್‌ಕೀಪರ್), ಶಾನ್ ಅಬಾಟ್ (ಫಾಸ್ಟ್ ಬೌಲರ್),ನೇಥನ್ ಎಲೀಸ್ (ಫಾಸ್ಟ್ ಬೌಲರ್) ಆಡಮ್ ಝಾಂಪ (ಲೆಗ್ ಸ್ಪಿನ್ನರ್) ಜೇಸನ್ ಬೆಗ್ರೆನ್‌ಡಾರ್ಫ್ (ಎಡಗೈ ವೇಗಿ)