ಪುಟ್ಟರಂಗಶೆಟ್ಟರ ಶಿಪಾರಸ್ಸು ಪತ್ರಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ..!
ಹನೂರು : ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಕಾರ್ಯದರ್ಶಿ ಹುದ್ದೆ ಕಾರ್ಯನಿರ್ವಹಿಸುತ್ತಿರುವ ಸರಸ್ವತಿಯವರ ಕಾರ್ಯವೈಕರಿಗೆ ಭಕ್ತಾಧಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಲ್ಲದೆ ದೇವಾಲಯದ ನಡೆಯುವ ಹಲವು ಕಾಮಗಾರಿಗಳಿಗೂ ಸಹ ಇವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮ ಗುಣಮಟ್ಟಕ್ಕೆ ಆದ್ಯತೆ ಕೊಟ್ಟಿದ್ದಾರೆ. ಸಾಲದೆಂಬಂತೆ ಭಕ್ತರ ಜೊತೆಯಲ್ಲಿಯೆ ಭಕ್ತರಾಗಿ ಹಲವು ದಿಟ್ಟ ಕ್ರಮಕೈಗೊಂಡು ಉತ್ತಮ ಕೆಲಸ ಮಾಡಿದ ಅಧಿಕಾರಿಗಳ ಸಾಲಿನಲ್ಲಿ ಇವರು ಸಹ ಒಬ್ಬರಾಗಿದ್ದಾರೆ ಎನ್ನಬಹುದು. ಇವರು ಅಧಿಕಾರ ವಹಿಸಿಕೊಂಡ ನಂತರ ಹಲವಾರು ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಆಗುತ್ತಿದ್ದ ತೊಂದರೆಯನ್ನು ಸುರಿದೋಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದಕ್ಷ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರ್ಕಾರಕ್ಕೆ ಹೊಸದೇನಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟರು ತನ್ನದಲ್ಲದ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಅಧಿಕಾರಿಗಳಿಗೆ ಕಿರುಕುಳ ನೀಡಿ ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಂಡು ತಮ್ಮದೆ ಸರ್ಕಾರದ ಮಾನ ಹರಾಜು ಹಾಕಿ, ವಿರೋಧ ಪಕ್ಷಗಳ ವರ್ಗಾವಣೆ ದಂದೆಗೆ ಸಾಕ್ಷಿ ಎಂಬಂತಾಗಿದೆ. ತಾವೆ ಉಸ್ತುವಾರಿ ಸಚಿವರೆಂಬಂತೆ ಇದೆ ಪ್ರವೃತ್ತಿ ಮುಂದುವರಿಸಿದರೆ ಜಿಲ್ಲೆಯಾದ್ಯಂತ
ಕಾಂಗ್ರೆಸ್ ಕಾರ್ಯಕರ್ತರೆ ಇವರ ವಿರುದ್ದ ತಿರುಗಿ ಬೀಳುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಅಲ್ಲದೆ ಇದೆ ವಿಷಯವಾಗಿ ಕನ್ನಡ ವಿಜಯ ಸೇನೆ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಸರ್ಕಾರ ಇನ್ನು ಮುಂದಾದರೂ ಎಚ್ಚೆತ್ತಿಕೊಂಡು ದಕ್ಷ ಅಧಿಕಾರಿಗಳ ಜೊತೆ ಕೈಜೋಡಿಸಿ ಅಭಿವೃದ್ಧಿ ಕಾರ್ಯವನ್ನು ಮಾಡಬೇಕು ಎಂಬುದು ಭಕ್ತಾದಿಗಳ ಆಸೆಯಾಗಿದೆ.