ಸಸ್ಯಗಳನ್ನು ನಮ್ಮ ಮಕ್ಕಳನ್ನು ಬೆಳೆಸಿದಂತೆ
ಬೆಳೆಸಬೇಕು
ಇಂಡಿ: ಜಾಗತಿಕ ತಾಪಮಾನ ಹೆಚ್ಚಳ, ಅನಾವೃಷ್ಟಿ, ಅರಣ್ಯ ನಾಶ ಮುಂತಾದ ಪ್ರಾಕೃತಿಕ ವಿಕೋಪಗಳ ತಡೆಗಾಗಿ ಪ್ರತಿಯೊಬ್ಬರೂ ಕನಿಷ್ಠ ವರ್ಷಕ್ಕೊಂದಾದರೂ
ಗಿಡವನ್ನು ನೆಟ್ಟು ಪೋಷಿಸಬೇಕು ಎಂದು ಹಿರೇರೂಗಿ
ಉರ್ದು ಕ್ಲಸ್ಟರ್ ಸಿಆರ್‍ಪಿ ಬಾದಶಾಹ ಚಪ್ಪರಬಂದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ
ಜರುಗಿದ ಸಸ್ಯ ಶ್ಯಾಮಲ ಯೋಜನೆಯಡಿ ಸಸಿ ನೆಡುವ
ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿರೇರೂಗಿ ಕ್ಲಸ್ಟರ್ ಸಿಆರ್‍ಪಿ ಸಂತೋಷ ಚವ್ಹಾಣ ಮಾತನಾಡಿ,
ಹಸಿರಿನಿಂದ ಕಂಗೊಳಿಸುವ ಶಾಲೆಯ ವಾತಾವರಣವು
ಕಲಿಕೆಗೆ ಮತ್ತು ಸಾಧನೆಗೆ ಹೆಚ್ಚು ಪ್ರೇರಣೆ ನೀಡುತ್ತದೆ. ಎಲ್ಲರೂ ಒಗ್ಗಟ್ಟಾಗಿ ಪರಿಸರವನ್ನು ಉಳಿಸಿದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಗಾಳಿ, ಮಳೆ ಮತ್ತು ಪ್ರಕೃತಿಯ ಲಾಭವನ್ನು ಪಡೆಯಬಹುದು ಎಂದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಸಸ್ಯಗಳನ್ನು
ನಾವು ನಮ್ಮ ಮಕ್ಕಳನ್ನು ಬೆಳೆಸಿದಂತೆ ಬೆಳೆಸಬೇಕು.
ಸಸ್ಯಗಳು ಮಾನವನಿಗೆ ಮಾತ್ರವಲ್ಲದೆ ಸರ್ವ ಜೀವರಾಶಿಗೂ ಉಸಿರು, ಸಸ್ಯಗಳಿಂದಲೇ ಮಾನವನ ಉದ್ಧಾರ, ನಾವೆಲ್ಲರೂ ಮುಂದಿನ ಪೀಳಿಗೆಗಾಗಿ ಮನೆಗೊಂದು ಮರ ಊರಿಗೊಂದು ವನ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಶಿಕ್ಷಕ ಎಸ್.ಆರ್. ಚಾಳೇಕಾರ ಮಾತನಾಡಿ, ಹಸಿರೇ ನಮ್ಮೆಲ್ಲರ ಉಸಿರು ಹಸಿರಿನಿಂದ ನಮ್ಮೆಲ್ಲರ ಹೆಸರು ಆದ್ದರಿಂದ ನಾವೆಲ್ಲರೂ ನಮ್ಮ ಉಳಿವಿಗಾಗಿ ಹಾಗೂ ಜೀವಸಂಕುಲದ ಉಳಿವಿಗಾಗಿ ಸಮಾಜದ ಸದೃಢ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಸಸ್ಯದ ಮಹತ್ವವನ್ನು ಅರಿತು ಮಕ್ಕಳಿಗೆ ತಿಳಿಸಿ ಹೇಳಿ ಗಿಡ ಮರಗಳನ್ನು ಬೆಳೆಸುವಂತೆ ಅವರಲ್ಲಿ ಪ್ರೇರಣೆಯನ್ನು ನೀಡಬೇಕಾಗಿದೆ ಎಂದರು.
ಶಿಕ್ಷಕಿ ಎಸ್.ಡಿ. ಬಿರಾದಾರ ಮಾತನಾಡಿ, ಮೊದಲು ಹಿರಿಯರಾದ ನಾವೆಲ್ಲರೂ ಸಸ್ಯಗಳನ್ನು ನೆಟ್ಟು ಅವನ್ನು ಪೆÇೀಷಿಸಿ ಬೆಳೆಸಿ ಮಕ್ಕಳಿಗೆ ಮಾದರಿಯಾಗಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಹಸಿರಾಗಿದ್ದರೆ ಮಾತ್ರ ಸರ್ವ ಜೀವಿಗಳು ಬದುಕುತ್ತವೆ ಎಂದು ಹೇಳಿದರು.
ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ.ವೈ. ಪತ್ತಾರ, ಎ.ಎಂ. ಬೆದ್ರೇಕರ ಹಾಗೂ ಉರ್ದು ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು
ಮತ್ತು ಶಾಲಾ ಮಕ್ಕಳು ಭಾಗಿಯಾಗಿದ್ದರು.
ಇಂಡಿ: ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಸ್ಯ ಶ್ಯಾಮಲ ಯೋಜನೆಯಡಿ ಸಸಿ ನೆಡುವ ಕಾರ್ಯಕ್ಕೆ ತಾಲೂಕಿನ ಸಿಆರ್‍ಪಿಗಳು ಚಾಲನೆ ನೀಡಿದರು.