ವಿಜಯಪುರ: ಜಿಲ್ಲಾದ್ಯಂತ ಇಂದು ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿರುವ ಹಿನ್ನಲೆ 229 ವಾಹನಗಳ ಜಪ್ತಿ ಹಾಗೂ 288 ಮಾಸ್ಕ್ ಹಾಕದ ಕೇಸ್ ಗಳನ್ನು ದಾಖಲು ಮಾಡಲಾಗಿದೆ ಎಂದು ಎಸ್ಪಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರ ಜಿಲ್ಲೆಯ ಇಂಡಿ, ಬಸವನಬಾಗೇಬಾಡಿ, ವಿಜಯಪುರ ಸೇರಿದಂತೆ ಮೂರು ಕಡೆಗೆ ದಂಡ ಹಾಕಲಾಗಿದೆ. ಇಂಡಿಯಲ್ಲಿ 48ಬೈಕ್‌ಗಳು, 75 ಮಾಸ್ಕ್ ಹಾಕದವರಿಗೆ ಸೇರಿ 7500 ನಗದು ವಸೂಲಿ, ವಿಜಯಪುರ 127 ಬೈಕ್, 1 ಫೋರ್ ವಿಲ್ಹರ್, 4 ಇತರೆ ವಾಹನ, 104 ಮಾಸ್ಕ್ ದಂಡ ಸೇರಿದಂತೆ 18,500 ದಂಡ ವಸೂಲಿ ಹಾಗೂ ಬಸವನಬಾಗೇಬಾಡಿ 54 ಬೈಕ್ ಮಾಸ್ಕ್ ಸೇರಿದಂತೆ 109 ಮಾಸ್ಕ್ ದಂಡದ ಮೂಲಕ 10,900 ನಗದು ಜಪ್ತಿಗೈದಿದ್ದಾರೆ. ಈ ಬಗ್ಗೆ ಎಸ್ಪಿ ಆನಂದಕುಮಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.