ಸುತ್ತುಗೋಡೆಯಿಲ್ಲದ ಸರ್ಕಾರಿ ಶಾಲೆ: ಸಾಕುಪ್ರಾಣಿಗಳ ದಾಳಿಯಿಂದ ಕಂಗಾಲಾದ ಮಕ್ಕಳು..!
ಹನೂರು : ತಾಲೂಕಿನ ತಮಿಳುನಾಡು ಮತ್ತು ಕರ್ನಾಟಕ ಗಡಿಯoಚಿನಲ್ಲಿರುವ ಹೂಗ್ಯಂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಪೆದ್ದನಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಸುತ್ತು ಗೋಡೆ ಇಲ್ಲದೆ ಇರುವ ಕಾರಣ ಬುಧುವಾರದಂದು ಮದ್ಯಾಹ್ನದ ಸಮಯದಲ್ಲಿ 6 ವರ್ಷದ ಪುಟ್ಟ ಬಾಲಕಿಯ ಮೇಲೆ ಸಾಕು ಪ್ರಾಣಿ ಕೋಳಿ ಮತ್ತು ನಾಯಿಗಳು ದಾಳಿ ಮಾಡಿ ಗಾಯಗೋಳಿಸಿವೆ. ಬಾಲಕಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.ಈ ಶಾಲೆಯಲ್ಲಿ ದಿನನಿತ್ಯ ಮಕ್ಕಳು ವಿದ್ಯಾಭ್ಯಾಸ ಮಾಡುವ ಕೊಠಡಿಯ ಒಳಕ್ಕೆ ಹಸು, ಕೋಳಿ,ನಾಯಿ,ಸಾಕು ಪ್ರಾಣಿಗಳು ನುಗ್ಗಿ ತೊಂದರೆ ಕೊಡುತ್ತಿದ್ದೂ ಇವುಗಳ ಹಾವಳಿಯಿಂದ ಬೇಸತ್ತು ವಿದ್ಯಾರ್ಥಿಗಳನ್ನು ತಮ್ಮ ಪೋಷಕರು ಶಾಲೆ ಬಿಡಿಸುವ ತನಕ ಹೋಗಿದ್ದಾರೆ ಎಂಬ ಮಾತು ಕೇಳಿ ಬರುತ್ತೀದೆ. ಹಾಗೂ ಸ್ಥಳೀಯರು ನೆನ್ನೆ ನಡೆದ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರದಂದು ಶಾಲೆಗೆ ಬೀಗ ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ. ಆದ್ದರಿಂದ ಸಂಬಂಧ ಪಟ್ಟ ಜಿಲ್ಲಾಡಳಿತ ತಾಲೂಕು ಆಡಳಿತ ಜಿಲ್ಲಾ ಶಿಕ್ಷಣ ಇಲಾಖೆ ಪೆದ್ದನ ಪಾಳ್ಯ ಸರ್ಕಾರಿ ಶಾಲೆಗೆ ಸುತ್ತಲೂ ಸುತ್ತು ಗೋಡೆ ನಿರ್ಮಿಸಿ ಓದುವ ವಿದ್ಯಾರ್ಥಿಗಳಿಗೆ ಸಾಕು ಪ್ರಾಣಿಗಳಿಂದ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕೆಂಬುದು ಸ್ಥಳೀಯ ಗ್ರಾಮಸ್ಥರ ಒತ್ತಾಯವಾಗಿದೆ.