ಒಂದು ಕುರ್ಚಿಗೆ ಇಬ್ಬರು ಪಿಡಿಒಗಳ ಮದ್ಯೆ ಜಟಾಪಟಿ..!
ಹಿರೇಮಸಳಿ ಗ್ರಾಮ ಪಂಚಾಯತಿಯಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆ..!
ಇಂಡಿ : ಈ ಗ್ರಾಮದಲ್ಲಿ ಇಬ್ಬ, ಇಬ್ಬರೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ರೂ ಗ್ರಾಮದಲ್ಲಿ ಬೀದಿಯ ದೀಪ ಉರಿಯುವದಿಲ್ಲ, ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಸ್ವಚ್ಚತಾ ಸಮಸ್ಯೆ ಎದುರಿಸುತ್ತಿದ್ದೆವೆ. ಅದಲ್ಲದೇ ಮೂಲಭೂತ ಸೌಕರ್ಯ ಹಾಗೂ ಸೌಲಭ್ಯಗಳ ಜೊತೆಗೆ ಇತರೆ ಕಾಮಗಾರಿಯ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತಗೊಂಡಿವೆ. ಆದ್ದರಿಂದ ಗ್ರಾಮಸ್ಥರು ಅನೇಕ ಸಮಸ್ಯೆಗಳಿಂದ ಬಳಲುವಂತಾಗಿದೆ ಎಂದು ದೂರಿ ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಅವರಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಹೌದು ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಇಬ್ಬರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರೂ ಗ್ರಾಮದ ಜನರು ಕತ್ತಲಲ್ಲೆ ಇರುವಂತಾಗಿದೆ. ಹೌದು ಈ ಗ್ರಾಮದಲ್ಲಿ ಶೋಭಾ ಹೊರಪೆಟೆ ಎಂಬುವರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಈಗ ಅವರನ್ನು ವರ್ಗಾವಣೆ ಗೊಳಿಸಿ, ಅವರ ಸ್ಥಾನಕ್ಕೆ ಮಹಾದೇವ ಕೆರೂಟಗಿ ಎಂಬುವರನ್ನು ನಿಯೋಜಿನೆ ಮಾಡಿ ಹಿರೇಮಸಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಆದೇಶವಾಗಿದೆ. ಆದರೆ ಈ ಮೊದಲು ಕಾರ್ಯ ನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಶೋಬಾ ಹೊರಪೇಟೆ ಅವರು ಕರ್ತವ್ಯಕ್ಕೂ ಹಾಜರಾಗದೇ, ಅಧಿಕಾರಿವು ಹಸ್ತಾಂತರಿಸದೆ ವಿಳಂಭ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿ ಅತೀ ಅವಶ್ಯಕ ಮತ್ತು ಮೂಲಭೂತ ಸೌಲಭ್ಯ, ಸೌಕರ್ಯದ ಕೆಲಸಗಳು ಆಗುತ್ತಿಲ್ಲ. ಆದ್ದರಿಂದ ಈ ಇಬ್ಬರ ಅಧಿಕಾರಿಗಳ ಮದ್ಯ ಗ್ರಾಮಸ್ಥರು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಈ ಕೂಡಲೇ ಸರಕಾರದ ಆದೇಶದಂತೆ ಹೊಸದಾಗಿ ಬಂದ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಕರ್ತವ್ಯ ನಿರ್ವಹಿಸಲು ತಿಳಿಸಿ ಗ್ರಾಮಸ್ಥರ ಅನಾನುಕೂಲ ತಪ್ಪಿಸಬೇಕು ಎಂದು ಪ್ರವೀಣ ಶೆಟ್ಟಿ ಬಣದ ತಾಲೂಕು ಕರವೇ ಅಧ್ಯಕ್ಷ ಶೀವು ಮಲಕಗೊಂಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಿಯಾಜ್ ಗೌರ, ಸನಾವುಲ್ಲಾ ಗೂಗಿಹಾಳ, ಪಿಂಟು ಪಾಟೀಲ್, ದಯಾನಂದ ಪೂಜಾರಿ, ಫಯಾಜ ಅಹ್ಮದ ಬಾಗವಾನ ಉಪಸ್ಥಿತರಿದ್ದರು.