ಐಸಿಸಿ ವಿಶ್ವಕಪ್ 2023 : ಅಫ್ಘಾನಿಸ್ತಾನ ಬೌಲರಗಳ ವಿರುದ್ಧ ಅಕ್ಷರಶಃ ನಲುಗಿದ ಶ್ರೀಲಂಕಾ ತಂಡ, 7 ವಿಕೆಟ್‌ಗಳ ಭರ್ಜರಿ ಗೆಲುವು ಕಂಡ ಅಪಘನ್
Voice Of Janata Desk News : ICC ODI Men’s WORLD CUP 2023 : Shrilanka VS Afaganistan
ಪುಣೆ :ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ನೀಡಿದ 242 ರನ್ ಗುರಿ ಹಿಂಬಾಲಿಸಿದ ಅಫಘಾನಿಸ್ತಾನ ತಂಡ, ರಹಮತ್ ಶಾ, ಹಷ್ಮತ್‌ವುಲ್ಲಾ ಶಾಹಿದಿ ಹಾಗೂ ಅಝಮತ್‌ವುಲ್ಲಾ ಅರ್ಧಶತಕಗಳ ಬಲದಿಂದ 45.2 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಪುಣೆಯಲ್ಲಿ ನಡೆದ ಒಡಿಐ ವಿಶ್ವಕಪ್-2023ರ ಪಂದ್ಯದಲ್ಲಿ ಲಂಕಾ ವಿರುದ್ಧ ಆಫ್ಘಾನಿಸ್ತಾನ 7 ವಿಕೆಟ್ ಗಳ ಜಯ ಗಳಿಸಿದೆ.
ಈ ಗೆಲುವಿನ ಮೂಲಕ ಅಫ್ಘಾನಿಸ್ತಾನ ವಿಶ್ವಕಪ್ ಟೂರ್ನಿ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೇರಿದ್ದು, ಶ್ರೀಲಂಕಾಗೆ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಇನ್ನೂ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು, ಲಂಕಾ ತಂಡವನ್ನು 50 ಓವರ್ ಗಳಿಗೆ ಇನ್ನೂ 3 ಎಸೆತ ಬಾಕಿ ಇರುವಾಗಲೇ 241 ಸಾಧಾರಣ ಮೊತ್ತಕ್ಕ ಕಟ್ಟಿ ಹಾಕಿತ್ತು.
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ತಂಡ 241 ರನ್ ಗಳಿಗೆ ಆಲೌಟ್ ಆಗಿದ್ದು, ಶಾಹಿದಿ ಪಡೆಗೆ ಗೆಲ್ಲಲು 242 ರನ್ ಗಳ ಸಾಧಾರಣ ಗುರಿ ನೀಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ತಂಡ ಆಫ್ಘಾನಿಸ್ತಾನದ ಫಜಲ್ಹಕ್ ಫಾರೂಕಿ ಮತ್ತು ಮುಜೀಬ್ ಉರ್ ರೆಹಮಾನ್ ಬೌಲಿಂಗ್ ದಾಳಿ ಅಕ್ಷರಶಃ ನಲುಗಿ ಹೋಯಿತು.
ಸ್ಕೋರ್ ವಿವಿರ್
ಶ್ರೀಲಂಕಾ: 49.3 ಓವರ್‌ಗಳಿಗೆ 241-10 (ಪಥುಮ್ ನಿಸಾಂಕ 46, ಕುಸಾಲ್ ಮೆಂಡಿಸ್ 39, ಸದೀರ ಸಮರವಿಕ್ರಮ 36, ಮಹೇಶ ತೀಕ್ಷಣ 29; ಫಝಲಕ್ ಫಾರೂಖಿ 34ಕ್ಕೆ 4, ಮುಜೀಬ್ ಉರ್ ರೆಹಮಾನ್ 38ಕ್ಕೆ 2)
ಅಫಘಾನಿಸ್ತಾನ: 45.2 ಓವರ್‌ಗಳಿಗೆ 242-3 (ಇಬ್ರಾಹಿಂ ಝರ್ಡಾನ್ 39, ರಹಮತ್ ಶಾ 62, ಹಷಮತ್‌ವುಲ್ಲಾ ಶಾಹಿದಿ 58*, ಅಝಮತ್‌ವುಲ್ಲಾ ಓಮರ್‌ಝೈ 73*; ದಿಲ್ಷಾನ್ ಮಧುಶಂಕ 48ಕ್ಕೆ 2)