ಐಸಿಸಿ ವಿಶ್ವಕಪ್ 2023: ಹಾಲಿ ಚಾಂಪಿಯನ್ ಆಂಗ್ಲ ಬಳಗಕ್ಕೆ ಶ್ರೀಲಂಕಾ ವಿರುದ್ಧ ಮುಖಭಂಗ..!
Voice of Janata DesK News : ಗುರುವಾರ, ಅಕ್ಟೋಬರ್ 26ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಹೀನಾಯ ಮುಖಭಂಗ ಅನುಭವಿಸಿದೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಮತ್ತೆ ಮುಖಭಂಗವಾಗಿದ್ದು, ನೆರೆಯ ಶ್ರೀಲಂಕಾ ವಿರುದ್ಧ 8 ವಿಕೆಟ್ ಗಳ ಹೀನಾಯ ಸೋಲು ಕಂಡಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನೀಡಿದ 157 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ ಕೇವಲ 25.4 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 160ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಸಂಕ್ಷಿಪ್ತ ಸ್ಕೋರು:
ಇಂಗ್ಲೆಂಡ್: 33.2 ಓವರ್‌ಗಳಲ್ಲಿ 156 (ಜಾನಿ ಬೆಸ್ಟೊ 30, ಡೇವಿಡ್ ಮಲಾನ್ 28, ಬೆನ್ ಸ್ಟೋಕ್ಸ್ 43,ಮೋಯಿನ್ ಅಲಿ 15, ಡೇವಿಡ್ ವಿಲಿ ಔಟಾಗದೆ 14, ಮಹೀಷ ತೀಕ್ಷಣ 21ಕ್ಕೆ1, ಕಸುನ್ ರಜಿತಾ 36ಕ್ಕೆ2, ಏಂಜೆಲೊ ಮ್ಯಾಥ್ಯೂಸ್ 14ಕ್ಕೆ2, ಲಾಹಿರು ಕುಮಾರ 35ಕ್ಕೆ3)
ಶ್ರೀಲಂಕಾ: 25.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 160 (ಪಥುಮ್ ನಿಸಾಂಕ ಔಟಾಗದೆ 77, ಕುಸಾಲ ಮೆಂಡಿಸ್ 11, ಸದೀರಾಸಮರವಿಕ್ರಮ ಔಟಾಗದೆ 65, ಡೇವಿಡ್ ವಿಲಿ 30ಕ್ಕೆ2)
ಫಲಿತಾಂಶ: ಶ್ರೀಲಂಕಾ ತಂಡಕ್ಕೆ 8 ವಿಕೆಟ್‌ಗಳ ಜಯ
ಪಂದ್ಯಶ್ರೇಷ್ಠ: ಲಾಹಿರು ಕುಮಾರ.