ರಾಯಚೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ನೈಟ್ ಕರ್ಫ್ಯೂ(Night curfew) ಜೊತೆಗೆ ವೀಕೆಂಡ್ ಕರ್ಫ್ಯೂ(Weekend curfew)ವನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಆದರೆ ರಾಯಚೂರಿನಲ್ಲಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜನರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. 144 ಸೆಕ್ಷನ್ ಜಾರಿಯಲ್ಲಿದ್ದರೂ ಸಹ ಜನ ಡೋಂಟ್ ಕೇರ್ (Don’t Care) ಅನ್ನದೆ ಓಡಾಡುತ್ತಿದ್ದಾರೆ. ಇನ್ನು ರಾಯಚೂರು ರೈಲ್ವೆ ನಿಲ್ದಾಣ (Raichur Railway Station)ಮುಂಭಾಗದ ಸರ್ಕಲ್ ನಲ್ಲಿ ಗುಂಪುಗುಂಪಾಗಿ ನಿಂತ ಕೂಲಿಕಾರ್ಮಿಕರು, ಓಡಾಡುತ್ತಿರುವ ಜನ-ಸಾಮಾನ್ಯರು ಹಾಗೂ ಆಂಧ್ರ – ತೆಲಂಗಾಣದಿಂದ ಬಂದಿರುವ ನೂರಾರು ಕಾರ್ಮಿಕರರು. ಪೊಲೀಸರು ಫೀಲ್ಡಿಗಿಳಿದು ಬಿಸಿ ಮುಟ್ಟಿಸಿದರು ಸಹ ಪೊಲೀಸರ ಕಣ್ ತಪ್ಪಿಸಿ ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು, ವೀಕೆಂಡ್ ಕರ್ಫ್ಯೂ ಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ಹಾಗೆ ಜನರು ವರ್ತಿಸುತ್ತಿದ್ದಾರೆ.