ಲಿಂಗಸೂಗೂರು : ರಾಯಚೂರ ಜಿಲ್ಲೆಯ ಹಟ್ಟಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡವರಿಗೆ ನೀಡಬೇಕಾದ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಔಷಧಿಗಳು, ಚುಚ್ಚುಮದ್ದುಗಳು ಪತ್ತೆಯಾಗಿವೆ.
ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ(ಹಟ್ಟಿ ಚಿನ್ನದ ಗಣಿ) ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾತ್ರೆಗಳು, ಔಷಧಿ, ಚುಚ್ಚುಮದ್ದುಗಳು ಸರಬರಾಜು ಆಗಿದ್ದವು. ಆದರೆ ಅವು ಅವಧಿ ಮೀರಿವೆ ಎಂದು ತಿಳಿದುಬಂದಿದೆ. ಈ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಉಚಿತವಾಗಿ ಔಷಧ ನೀಡಬೇಕು. ಅಲ್ಲದೇ, ಔಷಧಗಳ ಅವಧಿ ಮುಗಿಯವ ದಿನ ಸಮೀಪಿಸುತ್ತಿದ್ದರೆ ಬೇರೆ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಬೇಕಾಗಿತ್ತು. ಆದರೆ, ಕಾರ್ಯನಿರ್ವಹಿಸುವ ಫಾರ್ಮಾ ಸಿಸ್ ಟನ್ ಹಾಗು ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ವ್ಯರ್ಥವಾಗಿವೆ ಎಂದು ಕರವೇ ಮುಖಂಡ ದೂರಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ವೈದ್ಯರು ಹೊರಗಡೆ ಮೆಡಿಕಲ್ಗಳಿಗೆ ಚೀಟಿ ಬರೆದು ಕಳುಹಿಸುತ್ತಾರೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿವೆ.