ವಿಶ್ವ ಭಾರತಿ ವಿಧ್ಯಾ ಕೇಂದ್ರದಲ್ಲಿ ಮಹಾತ್ಮ ಗಾಂಧಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಜಯಂತಿ..
ಇಂಡಿ : ಮಹಾತ್ಮ ಗಾಂಧಿಜಿ ಹಾಗೂ ಲಾಲ ಬಹೂದ್ದೂರ ಶಾಸ್ತ್ರಿ ಅವರು ದೇಶಕ್ಕಾಗಿ ಸತ್ಯ ಶಾಂತಿ ಅಹಿಂಸೆಯ ಮೂಲಕ ಹೋರಾಡಿ ಸ್ವಾತಂತ್ರವನ್ನು ತಂದುಕೊಟ್ಟರು. ಇಂದು ಜಗತ್ತಿನಾದ್ಯಂತ ಅಹಿಂಸಾ ದಿನವನ್ನಾಗಿ ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ಸಂಸ್ಥೆಯ ಅಧ್ಯಕ್ಷ ವಿ.ಜಿ ಕಲ್ಮನಿ ಹಾಗೂ ಸಂಸ್ಥೆಯ ಮಾರ್ಗದರ್ಶಕ ಪಿ.ಜಿ ಕಲ್ಮನಿಯವರು ಮಾತನಾಡಿದರು..
ಸೋಮವಾರ ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿಧ್ಯಾ ಕೇಂದ್ರದ ಶಾಲೆಯಲ್ಲಿ ಆಯೋಜಿಸಿರುವ ಮಹಾತ್ಮ ಗಾಂಧಿಜಿ ಹಾಗೂ ಲಾಲ ಬಹದ್ದೂರ್ ಜಯಂತಿ ನಿಮತ್ಯದ ಕಾರ್ಯಕ್ರಮದಲ್ಲಿ ಪಿಕೆಪಿಎಸ್ ನಿರ್ದೇಶಕ ಬೀಮರಾಯ ಮೇತ್ರಿ, ಗ್ರಾ ಪಂ ಮಾಜಿ ಅಧ್ಯಕ್ಷ ರಮೇಶ ತಮಶೆಟ್ಟಿ ಹಾಗೂ ಗಣ್ಯರು ಮಹಾತ್ಮರ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಿದರು.
ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರವನ್ನು ಪಡೆದಿರುವ ಪ್ರಪಂಚದಲ್ಲೆ ಏಕೈಕ ದೇಶ ಅಂದ್ರೆ ಭಾರತ ಅದು ಮಹಾತ್ಮಾ ಗಾಂದಿಜೀಯವರ ಹೋರಾಟದಿಂದ ಪ್ರಮಾಣಿಕತೆಗೆ ಇನ್ನೊಂದು ಹೆಸರೆ ಮಾಹಾತ್ಮಾ ಗಾಂದಿಜೀ ಹಾಗೂ ಲಾಲಬಹದ್ದೂರ ಶಾಸ್ರೀಜಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಇರ್ವರು ಮಹಾತ್ಮರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಇತ್ತೀಚೆಗೆ ಜರುಗಿದ ಗಣೇಶ ಉತ್ಸವದಲ್ಲಿ ಏರ್ಪಡಿಸಿದ ವಿಜ್ಞಾನ ಚಿತ್ರಗಳ ರಂಗೋಲಿ, ಗಾಯನ ಭಾಷಣ ,ಪ್ರಬಂದ, ಸ್ಪರ್ದೆಗಳಲ್ಲಿ ಪ್ರಥಮ ದ್ವಿತೀಯುವ, ತೃತೀಯ ಸ್ಥಾನಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಯಪ್ಪ ಪರಗೊಂಡಕ್, ನಿಂಗಪ್ಪ ತಾಂಬೆ, ನಿಲಪ್ಪ ಕರ್ಜಗಿ ಆಢಳಿತಾಧಿಕಾರಿ ಶ್ರೀದೇವಿ ಕಲ್ಮನಿ, ಸುನಿಲ ವಿ ಆರ್ ಹಾಗೂ ಎಲ್ಲ ಗುರುಗಳು-ಗುರುಮಾತೆಯರು ಉಪಸ್ಥರಿದ್ದರು. ಕಾರ್ಯಕ್ರಮವನ್ನು ಶಿವಾನಂದ ಕಲ್ಮನಿ ಶಿಕ್ಷಕರು ನಿರೂಪಿಸಿ ತುಕಾರಾಮ ಶಿಕ್ಷಕರು ವಂದಿಸಿದರು.