ನಿಂಬೆ ನಾಡಲ್ಲಿ ಗ್ರಾ.ಪಂ ಮಿಂಚಿಗ್ | ಅಭಿವೃದ್ಧಿಗೆ ಸಿಕ್ಕ ಪ್ರಶಸ್ತಿ |
ಚವಡಿಹಾಳ ಗ್ರಾ.ಪಂ ಗೆ ಮೂರನೆಯ ಬಾರಿ ಗಾಂಧಿಗ್ರಾಮ
ಪ್ರಶಸ್ತಿ
ಇಂಡಿ : ಸ್ವಚ್ಚತೆ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಿದ ತಾಲೂಕಿನ ಚವಡಿಹಾಳ ಗ್ರಾ.ಪಂ ಗೆ ಮೂರನೆಯ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಚವಡಿಹಾಳ ಗ್ರಾಪಂ ತಾಲೂಕಿನ ೩೮ ಗ್ರಾಪಂಗಳಲ್ಲಿ ೨೦೨೨-೨೩ ನೇ ಸಾಲಿಗಾಗಿ ಗ್ರಾಪಂ ಅಮೃತ ಗ್ರಾಮ ಯೋಜನೆ ಅಡಿ ಕೆರೆ ನಿರ್ಮಾಣ, ಡಿಜಿಟಲ್ ಗ್ರಂಥಾಲಯ, ಅತ್ಯುತ್ತಮ ಕಾರ್ಯನಿರ್ವಹಣೆ, ಪಂಚಾಯತ ಕಟ್ಟಡ, ಶುದ್ಧ ಕುಡಿಯುವ ನೀರು ಮತ್ತು ಶುಚಿತ್ವ, ರಸ್ತೆ ನಿರ್ಮಾಣ,
ಗ್ರಾಪಂ ಸೌಲಭ್ಯ ಜನರಿಗೆ ತಲುಪಿಸುವದು ,ತೆರಿಗೆ ವಸೂಲಾತಿ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವುದು ತಾಲೂಕಿನ ಗರಿಮೆ ಹೆಚ್ಚಿಸಿದೆ. ಮೊದಲ ಬಾರಿ ೨೦೧೯-೨೦, ಎರಡನೆಯಬಾರಿಗೆ ೨೦೨೦-೨೧ ನೇ
ಸಾಲಿಗಾಗಿ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಈಗ ಮತ್ತೆ
ಮೂರನೆಯ ಬಾರಿಗೆ ಗಾಂಧಿ ಗ್ರಾಮ ತನ್ನದಾಗಿಸಿಕೊಂಡಿದೆ.
ಗ್ರಾಮದಲ್ಲಿ ಸ್ವಚ್ಚ ಭಾರತಮಿಶನ್ ಅಡಿಯಲ್ಲಿ ೬ ಲಕ್ಷ ರೂ
ವೆಚ್ಚದಲ್ಲಿ ಚರಂಡಿ ಯೋಜನೆ, ೧.೮೦ ರೂ ವೆಚ್ಚದಲ್ಲಿ
ಚವಡಿಹಾಳ ಮತ್ತು ಚೋರಗಿ ಗ್ರಾಮಕ್ಕೆ ತಲಾ ಒಂದು
ಸಾಮೂಹಿಕ ಶೌಚಾಲಯ, ನೈರ್ಮಲ್ಯ ಮತ್ತು ಶುಚಿತ್ವ
ಯೋಜನೆ ಅಡಿಯಲ್ಲಿ ೨೦ ಲಕ್ಷ ರೂ ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ , ಪ್ರತಿ ಕುಟುಂಬಕ್ಕೆ ೨ ಬಕೇಟ ನೀಡಿ ಕೃಷಿ ಕಸ ಮತ್ತು ಒಣ ಕಸ ಸಂಗ್ರಹಿಸುವದು, ಒಂದು ವಾಹನ ಖರೀದಿ, ೨.೫ ಎಕರೆ ಜಾಗದಲ್ಲಿ ಘಟಕ ನಿರ್ಮಾಣ ಕಾರ್ಯ ಮಾಡಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ೩೦ ಲಕ್ಷ ರೂ ವೆಚ್ಚದಲ್ಲಿ ಚವಡಿಹಾಳ, ಚೋರಗಿ ಗ್ರಾಮದಲ್ಲಿ ಹಳ್ಳಕ್ಕೆ
ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ.
೧೬.೨೫ ಲಕ್ಷ ರೂ ವೆಚ್ಚದಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ, ೨೦ ಲಕ್ಷ ರೂ ವೆಚ್ಚದಲ್ಲಿ ಗ್ರಾ.ಪಂ ಕಟ್ಟಡ, ಹದಿ
ನಯದನೆಯ ಹಣಕಾಸು ಅಡಿಯಲ್ಲಿ ಕಟ್ಟಡಕ್ಕೆ ೪ ಲಕ್ಷ ರೂ ಉಪಕರಣ, ೧೦ ಲಕ್ಷ ಶಾಸಕರ ನಿಧಿಯಲ್ಲಿ ಗ್ರಾಪಂ ಗಣಕೀಕರಣ ಮತ್ತು ಸಭಾಗ್ರಹ, ಹೂದೋಟ, ಮತಾತ್ಮಾ ಗಾಂಧಿರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಡಿ ೧ ಗುಂಟೆ ಜಾಗೆಯಲ್ಲಿ ಗ್ರಾಪಂ ಕಟ್ಟಡಕ್ಕೆ ಕಂಪೌಡ ನಂತಹ ಅನೇಕ ಕಾರ್ಯಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಗ್ರಾಮದಲ್ಲಿ ೯ ಲಕ್ಷ ರೂ ವೆಚ್ಚದಲ್ಲಿ ಫೇವರ ಬ್ಲಾಕ್ರ ಸ್ತೆ, ೫ ಲಕ್ಷದಲ್ಲಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ೪ ಲಕ್ಷ ರೂ ವೆಚ್ಚದಲ್ಲಿ ದನಗಳಗೆ ಕುಡಿಯುವ ನೀರಿನ ತೊಟ್ಟೆ, ೪ ಲಕ್ಷ ರೂ ವೆಚ್ಚದಲ್ಲಿ ೨೦ ರೈತರಿಗೆ ಸಾಮಾನ್ಯ ರೈತರಿಗೆ ೨೦೦೦೦ ರೂ ದಂತೆ ಮತ್ತು ಪರಿಶಿಷ್ಠ ಜಾತಿ ಮತ್ತು ಪಪಂ ಫಲಾನುಭವಿ ರೈತರಿಗೆ ರೂ ೪೦೦೦೦ ಶೆಡ್ಡು ನಿರ್ಮಾಣದಂತಹ ಅನೇಕ ಜನಪ್ರಿಯ, ಜನಪರ ಕಾರ್ಯ ಮಾಡಿದ್ದಾರೆ.
ರೂ ೩೫ ಲಕ್ಷ ವೆಚ್ಚದಲ್ಲಿ ಚವಡಿಹಾಳ ಗ್ರಾಮಕ್ಕೆ ೬ ಚೆಕ್ಕ್
ಡ್ಯಾಂ, ಚೋರಗಿ ಗ್ರಾಮಕ್ಕೆ ೪ ಚೆಕ್ಕ ಡ್ಯಾಂ, ೬ ಲಕ್ಷ ರೂ
ವೆಚ್ಚದಲ್ಲಿ ಚೋರಗಿ ಗ್ರಾಮಕ್ಕೆ ಫೇವರ ಬ್ಲಾಕ್ ರಸ್ತೆ, ೩
ಲಕ್ಷ ರೂ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ, ಶೇ ೧೦೦ ರಷ್ಠು ಕರ ವಸೂಲಾತಿ ಮಾಡಿದ್ದು ೫ ಹೈ ಮಾಸ್ಟರ್ ಬಲ್ಬಗಳನ್ನು ಗ್ರಾಮಗಳಲ್ಲಿ ಅಳವಡಿಸಲಾಗಿದೆ. ಗ್ರಾ ಪಂ ಜಿಲ್ಲೆಯ ಅತ್ಯುತ್ತಮ ೧೦ ಗ್ರಾ ಪಂ ಗಳಲ್ಲಿ ಒಂದಾಗಿದೆ. ಗ್ರಾ.ಪಂ ಕಟ್ಟಡದಲ್ಲಿ ಕಂಪ್ಯೂಟರ್ ಕೋಣೆ,ಕರ ವಸೂಲಾತಿ ಕೋಣೆ,ತಾಂತ್ರಿಕ ವಿಭಾಗ, ಪಿಡಿಓ,ಕಾರ್ಯದರ್ಶಿ, ಮತ್ತು ಗ್ರಾಪಂ ಅಧ್ಯ ಉಪಾಧ್ಯಕ್ಷರ, ಅಭಿಲೇಖಾಲಯದ ಪ್ರತ್ಯೇಕ ಕೋಣೆ ಗಳಿವೆ. ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳು ಜನರು ಭಾಗವಹಿಸುವಿಕೆಗಾಗಿ ನಿರಂತರವಾಗಿ ಸ್ಪಂದನಶೀಲ ತರಬೇತಿ ಕಾಯ್ಕçಮ ಯೋಜನೆಗೆ ೧೩.೨೬ ಲಕ್ಷ ರೂ ವೆಚ್ಚದಲ್ಲಿ ರಾಷ್ಟ್ರೀಯ ಜೀವನೋಪಾಯ ಸಂಘಸಂಸ್ಥೆ ಚಟುವಟಿಕೆಗಳಿಗೆ ಸಭಾಗ್ರಹ ಕಟ್ಟಡ, ೧೩.೨೬ ಲಕ್ಷ ರೂ ವೆಚ್ಚದಲ್ಲಿ ಗೋದಾನ ನಿರ್ಮಾಣ ಕಾರ್ಯ ಮಾಡಿ ಮಾದರಿ – ಯಾಗಿದ್ದಾರೆ.
ಇಂಡಿ ತಾಲೂಕಿನ ಇತಿಹಾಸದಲ್ಲಿಯೇ ಚವಡಿಹಾಳ ಗ್ರಾಪಂ ಸಾಧನೆ ಒಂದು ಮೈಲುಗಲ್ಲು. ಗ್ರಾಪಂ ಅಭಿವೃದ್ಧಿ
ಅಧಿಕಾರಿ, ಹಿಂದಿನ ಅಧ್ಯಕ್ಷರ, ಮತ್ತು ಎಲ್ಲ ಹಿಂದಿನ ಮತ್ತು
ಈಗಿನ ಸದಸ್ಯರ ಶ್ರಮವಿದೆ.
ರಮೇಶಗೌಡ ಬಿರಾದಾರ ಅಧ್ಯಕ್ಷ ಗ್ರಾ.ಪಂ.ಚವಡಿಹಾಳ.
ನಮ್ಮ ಗ್ರಾ.ಪಂ ಗೆ ಈ ಪ್ರಶಸ್ತಿ ದೊರೆತಿರುವದು ಬಹಳ
ಸಂತೋಷವಾಗಿದೆ.ಇದಕ್ಕೆ ಅಧ್ಯಕ್ಷ,ಉಪಾಧ್ಯಕ್ಷ ಸೇರಿ ಎಲ್ಲ
ಸದಸ್ಯರ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರ ಅಡಗಿದೆ. ಈ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ.
ಸಿ.ಜಿ.ಪಾರೆ ಪಿಡಿಒ ಚವಡಿಹಾಳ
ಚವಡಿಹಾಳ ಗ್ರಾ.ಪಂ ಮೂರು ಬಾರಿ ಪ್ರಶಸ್ತಿಗೆ
ಪಾತ್ರರಾಗಿರುವದು ಹೆಮ್ಮೆಯ ವಿಷಯ. ಗ್ರಾ.ಪಂ ಕೀರ್ತಿ
ರಾಷ್ಟ್ ಮಟ್ಟದಲ್ಲಿ ಬೆಳಗಲಿ
ರಾಹುಲ್ ಶಿಂಧೆ ಸಿಇಒ ವಿಜಯಪುರ