ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ..
ಇಂಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
ರೈತರ ಜೀವನಾಡಿಯಾಗಿದ್ದು ಇವುಗಳ ಪ್ರಗತಿಗೆ
ಆಧ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ
ಎಂದು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ರಾಜಶೆಖರ
ನಾಟೀಕಾರ ಹೇಳಿದರು.
ಭಾನುವಾರ ತಾಲೂಕಿನ ಆಳೂರ ಗ್ರಾಮದ ಪ್ರಾಥಮಿಕ
ಕೃಷಿ ಪತ್ತಿನ ಸಹಕಾರಿ ಸಂಘದ ೧೧ನೇ ವರ್ಷದ ವಾರ್ಷಿಕ
ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನತೆ ಕೃಷಿ ಪತ್ತಿನ ಸಹಕಾರ
ಸಂಘಗಳು ತುಂಬ ಅನುಕೂಲವಾಗಿವೆ. ಇವುಗಳನ್ನು
ಸಾಲ ಪಡೆದುಕೊಂಡು ಕೃಷಿ ಚಟುವಟಿಕೆಗೆ ಸದ್ಬಳಕೆ
ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬಹದು ಎಂದ ಅವರು, ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ
ಸಹ ರೈತರು ಇದನ್ನೇ ಅವಲಂಭಿಸಿದ್ದಾರೆ. ಸರಕಾರ
ಕೂಡ ಅವರಿಗೆ ಶೂನ್ಯ ಬಡ್ಡಿ ದರಲ್ಲಿ ಸಾಲ
ದೊರೆಯುತ್ತದೆ. ಇದನ್ನು ಸಂಪೂರ್ಣವಾಗಿ ಸದ್ಭಳಕೆ
ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮದ ರೈತರಾದ ರಾಮನಗೌಡ ಪಾಟೀಲ ಮಾತನಾಡಿ,
ರೈತರು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ
ಯಾವುದೇ ಕಾರಣಕ್ಕೂ ಸಾಲ ಪಡೆದುಕೊಳ್ಳಬಾರದು.
ಸಂಘದಿಂದ ಸಾಲ ಪಡೆದುಕೊಂಡು ಹೈನುಗಾರಿಕೆ ಹಾಗೂ ನೀರಾವರಿ ಸೇರಿದಂತೆ ಇನ್ನಿತರ ಚಟುವಟಿಕೆಗೆ ಹಣ ಬಳಸಿಕೊಳ್ಳಬೇಕು ಎಂದರು. ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತದೆ.
ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡರೆ
ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು
ಹೇಳಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿಲಪ್ಪ ವಾಲೀಕಾರ
ಪ್ರಾಸ್ತಾವಿಕವಾಗಿ ಮಾತನಾಡಿ, ೨೦೨೨-೨೩ ನೇ ಆರ್ಥಿಕ ವರ್ಷದ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷ ಸುರೇಶ ಧನಗರ, ನಿದೇಶಕರಾದ ನರಸಪ್ಪ ಗುಡ್ಡೇವಾಡಿ, ಪ್ರಭಾಕರ ನಾಟೀಕಾರ, ಭೀಮಸಿಂಗ ರಾಠೋಡ, ಹೊನ್ನಪ್ಪಗೌಡ ಪಾಟೀಲ, ಪಾರ್ವತಿ ನಾಟೀಕಾರ,
ಸುಮಿತ್ರಾ ನಾಯಿಕ, ವಿಠ್ಠಲ ಬಿರಾದಾರ, ಛಾಜು ಚವ್ಹಾಣ,
ಕೇಶಪ್ಪ ಪಾಟೀಲ, ರೈತರಾದ ಬಸಣ್ಣಗೌಡ ಪಾಟೀಲ,
ಗುರುಪಾದ ವಾಡಿ, ಸಂತೋಷ ಬಾಬಳಗಾಂವ, ಸಿಬ್ಬಂದಿಗಳಾದ ರಮೇಶ ರಾಠೋಡ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.