ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ.
ಅಪಜಲಪುರ: ತಾಲೂಕಿನ ಶಿವುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023/ 24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಜೈಭೀಮ್ ಸಿಂಗೆ ಸಸಿ ನೀರು ಎರೆಯುವ ಮೂಲಕ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಮುಖ್ಯ ಗುರು ಲಾಲಅಹ್ಮದ್ ಚೌದರಿ ರವರು ಮಾತನಾಡಿ, ಮಕ್ಕಳು ಪ್ರತಿಭೆಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ತಯಾರಾಗಿ ಬಂದು ವಿಶೇಷವಾಗಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕೆಲವು ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡರು ಇವತ್ತಿನ ಪ್ರತಿಭಾ ಕಾರಂಜಿಯಲ್ಲಿ ಸಂಗೀತ ಗೀತೆಗಳು ಭಾವಗೀತೆ ಜಾನಪದ ಕಲೆಗಳು ನೃತ್ಯ ಅಭಿನಯ ಗೀತೆ ಆಶುಭಾಷಣ ರಂಗೋಲಿ ಸ್ಪರ್ಧೆ ಮಣ್ಣಿನ ಮೂರ್ತಿಗಳು ಚಿತ್ರಕಲೆ ರಸಪ್ರಶ್ನೆಗಳು, ಚರ್ಚಾ ಸ್ಪರ್ಧೆ ಕಥೆಗಳು ನಿಮಿಕ್ರಿ, ಭಕ್ತಿಗೀತೆಗಳು ಇನ್ನು ಹೆಚ್ಚಿನ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದ್ದಾರೆ. ಮಕ್ಕಳು ಇದೇ ರೀತಿ ಪ್ರತಿಭೆಗಳಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಲಿ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಕರ ಸಂಘದ ಅಫಜಲಪುರ ತಾಲೂಕು ಅಧ್ಯಕ್ಷ ಗಾಂಧಿ ದಪೇದಾರ್ ಸಂಘದ ಸದಸ್ಯ ಹೈದರ್ ಚೌಧರಿ ಮಹೇಶ್ ಅಂಜುಟಗಿ ಗ್ರಾಮದ ಮುಖಂಡರಾದ ಅಣ್ಣಾರಾಯಗೌಡ್ ಪಾಟೀಲ್
ಶಂಕರ್ ಗೌರಗೊಂಡ ಸಿದ್ದರಾಮ ಹೊಸಮನಿ ಚಿಕ್ಕಯ್ಯ ಮಠ್ ಗೈಬುಸಾಬ್ ಆಳಂದ, ನೀಲಪ್ಪ ವಾಲಿಕಾರ್ ಸಿದ್ದನಗೌಡ ಪಾಟೀಲ್ ಸೈಯದ್ ಭಾಷಾ ಹಣಮೇಶ ಕೊಡೆಕಲ್ ಶ್ರೀಮತಿ ಕವಿತಾ ಮಡಿವಾಳ ಶರಣಬಸಯ್ಯ ಕಳ್ಳಿಮಠ್ ಶಂಕರ್ ದೇವಕಥೆ ಬಾಳಾಸಾಹೇಬ್ ಬಿರಾದಾರ್ ಸೇರಿದಂತೆ ಗ್ರಾಮಸ್ಥರು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಉಮೇಶ್ ಅಚಲೇರಿ, ಅಫಜಲಪುರ ತಾಲೂಕು, ಕಲ್ಬುರ್ಗಿ ಜಿಲ್ಲೆ..