ತಾಲೂಕು ಅಡಳಿತ ಸೌಧದಲ್ಲಿರುವ “ಗಣೇಶ ವಿಸರ್ಜನೆ” ಅದ್ದೂರಿ ಉತ್ಸವ..
ಇಂಡಿ : ತಾಲ್ಲೂಕು ಆಡಳಿತ ಸೌಧದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಗಣೇಶ್ ಮೂರ್ತಿಯನ್ನು ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಿ, ತದನಂತರ ವಿವಿಧ ವಾದ್ಯಗಳೊಂದಿಗೆ ವಿಸರ್ಜನೆಗೆ ತೆರಳಿದರು.
ಶನಿವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಯನ್ನು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬ್ಯಾಂಡ್
ಬಾಜಾ ಹಾಗೂ ವಿವಿಧ ವಾದ್ಯಗಳೊಂದಿಗೆ ಹಾಗೂ ಡಿಜೆ ಸದ್ದಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದ್ರು. ಪಟ್ಟಣದ ಪ್ರಮುಖ ರಸ್ತೆಯುದ್ದಕ್ಕೂ ಪಟಾಕ್ಷಿ ಸಿಡಿ ಮದ್ದುನಿಂದ ಅದ್ದೂರಿ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಗಣಪತಿ ದರ್ಶನ ಪಡೆದು ಹಾಗೂ ಅವರು ಸಹ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಿಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.