ನಾಟಕಗಳು ಜೀವನ ಕಲೆ ಕಲಿಸುವ ಪ್ರಬಲ ಮಾಧ್ಯಮ ; ಸಂಗನಗೌಡ ಬಿರಾದಾರ
ಇಂಡಿ : ಗ್ರಾಮೀಣ ಭಾಗದ ನಾಟಕಗಳು ಮರೆಮಾಗುತ್ತಿವೆ. ಆದರೆ ನಾಟಕಗಳು ಜಾತಿ ಮತ ಪಂತ ಮರೆತು ಸಾಮರಸ್ಯ ಮೂಡಿಸುವ ಮತ್ತು ಬದುಕು ಬದಲಾವಣೆ ಮಾಡುವ ಪ್ರಮುಖ ಮಾಧ್ಯಮ ಎಂದು ಆದರ್ಶ ವಿ.ವಿ. ಸಂಘದ ತಾಲೂಕು ಅಧ್ಯಕ್ಷ ಹಾಗೂ ಉದ್ದಿಮಿ ಸಂಗನಗೌಡ ಬಿರಾದಾರ ಹೇಳಿದರು.
ತಾಲೂಕಿನ ಹಂಜಗಿ ಗ್ರಾಮದಲ್ಲಿ ಗಜಾನನ ಯುವಕ ಮಂಡಳಿ ಅವರು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸಿದ್ದು ನಾಲವಾತವಾಡ ಅವರ ಕಲಾ ತಂಡದ ಆಶ್ರಯದಲ್ಲಿ ನಡೆಯಲಿರುವ ಸುಂದರ ಸಾಮಾಜಿಕ ಹಾಸ್ಯ ಭರಿತ “ಹಳ್ಳಿ ಹುಡಗಿ, ಮೊಸರ ಗಡಿಗಿ” ನಾಟಕವನ್ನು ಉದ್ಘಾಟಿಸಿ ಮಾತಾನಾಡಿದರು.
ಕಲೆಗೆ ಜಗತ್ತಿನ ಎಲ್ಲಾ ದೇಶಗಳಲ್ಲಿ ತನ್ನದೇಯಾದ ಗೌರವ ಸ್ಥಾನವಿದೆ. ಇದು ನಾಗರಿಕತೆಯ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಜಗತ್ತಿನ ಮಹಾನ್‍ದಾರ್ಶನಿಕರು, ಮುತ್ಸದಿಗಳೂ ಸಹ ರಂಗಭೂಮಿಯಿಂದ ಪ್ರಭಾವಿತರಾಗಿದ್ದಾರೆ. ರಂಗಕಲೆ ಭಾಷೆ ಸಂಸ್ಕøತಿಯನ್ನು ಮೀರಿದಕಲೆಯಾಗಿದೆ
ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ನಾಟಕಗಳು ಮರೆಯಾಗುತ್ತಿದಿದ್ದು ಬೇಜಾರಿನ ವಿಷಯ. ಮನುಷ್ಯನ ಜೀವನ ರೂಪಿಸುವಲ್ಲಿ ನಾಟಕ ಮತ್ತು ಗ್ರಾಮೀಣ ಕ್ರೀಡೆಗಳು ಅತೀ ಅವಶ್ಯಕ. ಆದರೆ ಹೊಸ ತಂತ್ರಜ್ಞಾನಕ್ಕೆ ಅಂಟಿಕೊಂಡು ಮಕ್ಕಳು ಮತ್ತು ನಾವುಗಳು ನಮ್ಮ ಪರಂಪರೆ ಮರೆಯುತ್ತಿದ್ದೆವೆ. ಆದರೆ ನಾಟಕಗಳು ಜೀವನ ಕಲೆ ಕಲಿಸುವ ಪ್ರಬಲ ಮಾಧ್ಯಮ. ಸಾಮಾಜಿಕ ಕಳಕಳಿ ಕಾಳಜಿಯ ನೈಜತೆ ತೋರಿಸುವ ಗ್ರಾಮೀಣ ನಾಟಕಗಳು ಮರೆಯಾಗಿತ್ತಿರುವುದು ಆತಂಕದ ಬೆಳವಣಿಗೆ. ಇವತ್ತಿನ ಈ ನಾಟಕದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಖುಷಿಯ ಸಂಗತಿ. ಹಬ್ಬಗಳ ಹಾಗೂ ವಿವಿಧ ಕಾರ್ಯಕ್ರಮಗಳ ಆಚರಣೆಯಿಂದಲೇ ಮಾನವನ ಸಂಭಂದಗಳು ವೃದ್ದಿಯಾಗುತ್ತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯೆ ವೇದಮೂರ್ತಿ ಚಿದಾನಂದ ಶಾಸ್ತ್ರೀಗಳು, ಗ್ರಾ.ಪಂ ಅಧ್ಯಕ್ಷ ಅಬ್ಬಾಸಲಿ ಜಮಖಂಡಿ ಹಣಮಂತರಾಯಗೌಡ ಪಾಟೀಲ, ಪ್ರಕಾಶಗೌಡ ಬಿರಾದಾರ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಶಿವಾನಂದ ಬಿರಾದಾರ, ಆನಂದ ಕುಮಾರ್ ಬಿರಾದಾರ, ಮಲಕಪ್ಪ ತಡ್ಲಗಿ,ರಮೇಶ್ ಕೊಟ್ಟಲಗಿ, ರವಿ ಗೌಡರ, ಲಕ್ಷ್ಮಣ ತೋರವಿ ಇನ್ನೂ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು, ನಾಟಕ ಅಭಿಮಾನಿಗಳು ಉಪಸ್ಥಿತರಿದ್ದರು.