ರಾಯಚೂರು: ನಗರದ ಹೊರ ವಲಯಗಳಲ್ಲಿ ಆಸ್ಪತ್ರೆಗಳ ಔಷಧಿ ಮತ್ತು ಮತ್ತಿತರ ಅಪಾಯಕಾರಿ ಸಾಮಾಗ್ರಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ನಿಯಮಗಳನ್ವಯ ಔಷಧಿಗಳನ್ನು ಮತ್ತಿತರ ಆಸ್ಪತ್ರೆ ಉಪಯೋಗಿ ವಸ್ತುಗಳನ್ನು ಅತ್ಯಂತ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂಬ ನಿಯಮಗಳಿದ್ದರೂ, ನಗರದಲ್ಲಿ ವಿಸ್ತೀರ್ಣ ಬಡಾವಣೆಗಳಲ್ಲಿ ಇವುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ರಾಶಿ ರಾಶಿ ಔಷಧಿ ಮತ್ತು ಚುಚ್ಚುಮದ್ದು ಇನ್ನಿತರ ಸಾಮಾಗ್ರಿಗಳನ್ನು ಮನಬಂದಂತೆ ಎಸೆಯಲಾಗಿದೆ. ಇದರಿಂದ ಈ ಭಾಗದ ಜನರು ತೀವ್ರ ತೊಂದರೆಗೆ ಗುರಿಯಾಗಬೇಕಾಗಿದೆ. ಈ ಕುರಿತು ಸಂದೀಪ್ ಸಿಂಗನೋಡಿ ಇವರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿ, ಆರೋಗ್ಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ದುರಂತವೆಂದರೇ ಇಲ್ಲಿವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾರು ಈ ತ್ಯಾಜ್ಯಗಳನ್ನು ಎಸೆಯುತ್ತಿದ್ದಾರೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ. ಪ್ರತಿ ಬಡಾವಣೆಯಲ್ಲೂ ಖಾಲಿ ರಸ್ತೆಗಳಲ್ಲಿ ಈ ರೀತಿಯ ತ್ಯಾಜ್ಯ ವಿಲೇವಾರಿ ಮಾಡಿರುವುದು ಕಂಡು ಬರುತ್ತದೆ. ನಗರಸಭೆ ಮತ್ತು ಆರೋಗ್ಯ ಇಲಾಖೆ ಆಸ್ಪತ್ರೆಗಳ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೇ, ಇದರಿಂದ ಪರಿಸರ ಕಲುಷಿತಗೊಂಡು ಜನ ಅನಾರೋಗ್ಯಕ್ಕೆ ಗುರಿಯಾಗುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗುರಿಯಾಗುತ್ತಾರೆ. ಕೊರೊನಾ ಸೇರಿದಂತೆ ಇತರೆ ಸಮಸ್ಯೆ ತೀವ್ರವಾಗಿದ್ದು, ಇವುಗಳನ್ನು ನಿಯಂತ್ರಿಸಲು ಒಂದೆಡೆ ಕ್ರಮ ಕೈಗೊಳ್ಳದಿದ್ದರೇ, ಮತ್ತೊಂದೆಡೆ ತ್ಯಾಜ್ಯ ವಿಲೇವಾರಿಯಿಂದ ಸಾರ್ವಜನಿಕರಿಗೆ ಮತ್ತೊಂದು ಸಮಸ್ಯೆಗೆ ಗುರಿಯಾಗುವಂತೆ ಮಾಡಲಾಗುತ್ತಿದೆ.