ಇಂಡಿ : ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಐತಿಹಾಸಿಕ ಭಾಷಣವನ್ನು ಸ್ಮರಿಸುವ ದಿನವಿಂದು. ಇಂದಿಗೆ 130ವರ್ಷ ಪೂರೈಸಿರುವ ಪ್ರಯುಕ್ತ ಇಂದು ಇಂಡಿಯ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವಿವೇಕಾನಂದರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಸಂಘದ ಅಧ್ಯಕ್ಷರಾದ ರಾಮಸಿಂಗ ಕನ್ನೊಳ್ಳಿ ಮಾತಾನಾಡಿದರು.
ಅವರು ಇದೆ ದಿನ ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ತನ್ನ ಅದ್ಭುತ ಭಾಷಣದ ಮೂಲಕ ವಿಶ್ವವನ್ನು ಗೆದ್ದು, ಭಾರತ ಮತ್ತು ಭಾರತದ ಚಿಂತನೆಯೇ ಶ್ರೇಷ್ಠ ಎಂದು ವಿಶ್ವಕ್ಕೆ ಸಾರಿದ್ದರು..ಎಂದು ಹೇಳಿದರು. ಶರಣಬಸು ಲಬ್ಬಾ ಪ್ರಭು ಕಪ್ಪಾ ಧಾನಪ್ಪ ಹತ್ತಿ ಇದ್ದರು.