ಕೌದಳ್ಳಿ ಕ್ಲಸ್ಟರ್ ಮಠದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ
ಹನೂರು: ತಾಲೂಕಿನ ಕೌದಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲೆ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ಕೌದಳ್ಳಿ ಗ್ರಾಮದ ಸರ್ಕಾರ ಹಿರಿಯ ಪ್ರೌಢ ಶಾಲೆ ವಿಭಾಗದ ಸುತ್ತ ಮುತ್ತಲಿನ ಗ್ರಾಮಗಳ ಶಾಲೆಯ ಮಕ್ಕಳಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಶಾಲಾ ಮಕ್ಕಳು ವಿವಿಧ ಉಡುಗೆಗಳನ್ನು ತೊಟ್ಟು ಕಂಗೊಳಿಸುತ್ತ ಇದದ್ದು ಕಂಡು ಬಂದಿತು. ವಿಶೇಷವಾಗಿ ಕೆಂಪಯ್ಯನಹಟ್ಟಿ ಗ್ರಾಮದಿಂದ ಕುಂಭ ಮೇಳದ ಮುಖಾಂತರ ಕಾರ್ಯಕ್ರಮ ಸಮಾವೇಶ ನೆಡೆಯುವ ಸ್ಥಳಕ್ಕೆ ಮೆರವಣಿಗೆ ಮುಖಾಂತರ ಬಂದು ತಲುಪಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಶಿಕ್ಷಕರು ಸೇರಿದ್ದಂತೆ ಸಿ ಆರ್ ಪಿ ಅನಿಲ್ ಕುಮಾರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಿದ್ದರಾಜು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಪ್ರೇಮ ರವರು ಉದ್ಘಾಟನೆ ಮಾಡಿದ್ದರು.
ಶಾಲೆಯ ಮಕ್ಕಳು ತಮ್ಮ ತಮ್ಮ ಪ್ರತಿಭೆಯನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಾಂತರ ಪ್ರತಿಭೆಯನ್ನು ಹೊರ ಹಾಕಿ ಕಾರ್ಯಕ್ರಮಕ್ಕೆ ಮೆರಗು ತಂದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದ ಶಿಕ್ಷಕ ಶ್ರೀ ವೀರಪ್ಪ ಹಾಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಮುಖ್ಯೋಪಾಧ್ಯಾಯಾರದ ಸಗಾಯ ಮೇರಿ, ಶಿವಶಂಕರ್ ನಾಯಕ್ ಪಿ ಡಿ ಓ ಸೇಲ್ವಾ ರಾಜ್, ಎಸ್ ಡಿ ಎಂ ಅಧ್ಯಕ್ಷ ಮಹಾದೇವ ಸ್ವಾಮಿ,ಶಿಕ್ಷಕರಾದ ಅರುಳಪ್ಪ, ಚಾಲಪ್ಪ, ಸಿದ್ದರಾಜು ಮತ್ತು ವಿವಿಧ ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.