ಹಗಲು ಹೊತ್ತಿನಲ್ಲಿಯೇ ವಿದ್ಯುತ್ ಪೂರೈಸಲು ರೈತರಿಂದ ಪ್ರತಿಭಟನೆ..!
ಇಂಡಿ : ತಿಂಗಳಿಂದ ರೈತರ ಜೊತೆ ಲೋಡ ಶೆಡ್ಡಿಂಗ್ ಕಣ್ಣಾ ಮುಚ್ಚಾಲೆ ನಡೆಯುತ್ತಿದ್ದೆ. ತಾಲ್ಲೂಕಿನೆಲ್ಲೆಡೆ ಮಳೆ ಕೈ ಕೊಟ್ಟು ಒಣಗುತ್ತಿರುವ ಬೆಳೆಯಿಂದ ಕಂಗಾಲಾಗಿರುವ ರೈತರು, ಪಂಪ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ಪರಿಪೂರ್ಣ ವಿದ್ಯುತ್ ನೀಡುವಂತೆ ಆಗ್ರಹಿಸಿ ರೈತರು ಹೆಸ್ಕಾಂ ಇಲಾಖೆಗೆ ಆಗಮಿಸಿ ಕಾರ್ಯನಿರ್ವಾಹಕ ಅಭಿಯಂತರರು ಎಸ್.ಎ.ಬಿರಾದಾರ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಎಸ್ ಆರ್ ಮೇಡೆಗಾರ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಹೆಸ್ಕಾಂ ಕಛೇರಿ ಎದುರು ಸುಮಾರು ನೂರಾರು ರೈತರು ಹಾಗೂ ಬಿಜೆಪಿ & ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ರೈತರನ್ನು ಬೆಂಬಲಿಸಿ ಸುಮಾರು 2 ಘಂಟೆಗಳ ಕಾಲ ಕಛೇರಿ ಬಾಗಿಲು ಎದುರು ಧರಣಿ ನಡೆಸಿದವರು, ಸರಕಾರದ ಅವ್ಯವಸ್ಥಿತೆ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.
ತಾಲೂಕಿನ ಗ್ರಾಮೀಣ ಪ್ರದೇಶದ ರೈತರಿಗೆ ಹಾಗೂ ವಿಧ್ಯಾರ್ಥಿಗಳಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ತುಂಬಾ ಸಮಸ್ಯೆ ಯಾಗುತ್ತಿದೆ. ಈಗ ಮತ್ತೆ ಮೊದಲಿನಂತೆ ಸಾಯಂಕಾಲ 6 ಘಂಟೆಯಿಂದ ಬೆಳಗ್ಗಿನ 6 ಗಂಟೆಯವರೆ ಸಿಂಗಲ್ ಫೆಸ್ ವಿದ್ಯುತ್ ಪೂರೈಸಬೇಕು. ಹಗಲು 7 ಘಂಟೆಗಳ ಕಾಲ 3 ಪೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ನೂರಾರು ರೈತರು ಒತ್ತಾಯ ಮಾಡಿದರು. ನಂತರ ಕಾರ್ಯನಿರ್ವಾಹಕ ಅಭಿಯಂತರ ಎಸ್ ಎ ಬಿರಾದಾರ ಮಾತಾನಾಡಿ ಅವರು, ಹಗಲು 4 ಘಂಟೆ ರಾತ್ರಿ 3 ಘಂಟೆ ವಿದ್ಯುತ್ ಪೂರೈಕೆ ಮಾಡುವ ಭರವಸೆ ನೀಡಿದರು.ಆದರೆ ರೈತರು ರಾತ್ರಿ 6ಗಂಟೆ ಯಿಂದ ಮುಂಜಾನೆ 6ಗಂಟೆಯವರಗೆ ಸಿಂಗಲ್ ಫೇಸ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ರೈತರ ನ್ಯಾಯುತ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿ ಮಾತಾನಾಡಿದರು.
ಈ ಸಂದರ್ಬದಲ್ಲಿ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ, ಬಿಜೆಪಿ ರೈತ ಮೂರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಸಿದ್ದಲಿಂಗ ಹಂಜಗಿ, ಶ್ರೀಶೈಲಗೌಡ ಪಾಟೀಲ, ಅಯೋಬ ನಾಟೀಕರ, ಬುದ್ದುಗೌಡ ಪಾಟೀಲ, ದೇವೇಂದ್ರ ಕುಂಬಾರ, ಯಲ್ಲಪ್ಪ ಹದರಿ, ಅನೀಲಗೌಡ ಬಿರಾದಾರ, ಸಿದ್ದು ಡಂಗಾ ಮಹಿಬೂಬ ಬೇವನೂರ, ಸೋಮು ನಿಂಬರಗಿ ಮಠ, ವೈ.ಎ.ಪಾಟೀಲ, ಹಣಮಂತ ಗುಡ್ಲ, ಸತ್ಯಪ್ಪ ಗುಡ್ಲ, ಶಂಕರ್ ಸದರಗೋಂಡ, ಶರತ ಪಾಟೀಲ, ರವಿಗೌಡ ಪಾಟೀಲ, ನಿಯಾಝ್ ಅಗರಖೇಡ,ಮಲ್ಲು ವಾಲಿಕರ, ಅಪ್ಪು ಪವಾರ, ಜಯರಾಮ ಚೌವ್ಹಾಣ್, ರಾಜು ಮುಲ್ಲಾ, ಇರ್ಫಾನ್ ಅಗರಖೇಡ, ರವಿ ಶಿಂದೆ, ಕಿರಣ ಕ್ಷತ್ರಿ, ಫಜಲು ಮುಲ್ಲಾ ಅಕಲಾದಿ, ಮಲ್ಲು ಬೀರನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.