ಅಕ್ರಮ ಗಾಂಜಾ ಸಂಗ್ರಹಣೆ ಮಹಿಳೆಯ ಬಂಧನ..! ಎಲ್ಲಿ..?
ಹನೂರು: ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಂಗ್ರಹಿದ್ದ ಒಣ ಗಾಂಜಾ ಜಾಲಕ್ಕೆ ಅಬಕಾರಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಮಂಗಳವಾರ ಜರುಗಿದ್ದು ಆರೋಪಿ ಗಂಗಮ್ಮ ಬಂಧಿತ ಮಹಿಳೆಯಾಗಿದ್ದಾಳೆ.
ಘಟನೆ ವಿವರ : ಹನೂರು ತಾಲೂಕಿನ ಹೂಗ್ಯಂ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಒಣ ಗಾಂಜಾ ಮಾರಾಟ ಮಾಡಲು ಸಂಗ್ರಹಿಸಿದ್ದ ಗಾಂಜಾ ಜಾಲಕ್ಕೆ ಖಚಿತ ಮಾಹಿತಿ ಮೇರೆಗೆ ಎಂ. ಡಿ. ಮೋಹನ್ ಕುಮಾರ್ ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಚಾಮರಾಜನಗರ ಇವರ ಮಾರ್ಗದರ್ಶನದಲ್ಲಿ ಸುನಿಲ್ ಡಿ. ಅಬಕಾರಿ ನಿರೀಕ್ಷಕರು ಕೊಳ್ಳೇಗಾಲ ವಲಯ ಇವರ ನೇತತ್ವದಲ್ಲಿ ಶ್ರೀಧರ್ ಡಿ. ಅಬಕಾರಿ ಉಪ ನಿರೀಕ್ಷಕರು ಅವರ ನೇತೃತ್ವದ ತಂಡ ಕಾರ್ಯಾಚರಣೆ ಮಾಡಿ ದಾಳಿ ನಡೆಸಿ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿದ್ದ ಗಾಂಜಾವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಇನ್ನೂ ಅಬಕಾರಿ ಇಲಾಖೆ ದಾಳಿ ಮಾಡಿ ಪರಿಶೀಲನೆ ಮಾಡಿದಾಗ ಆರೋಪಿಯು ತನ್ನ ಮನೆಯಲ್ಲಿ 8 ನೂರು ಗ್ರಾಂ ಒಣ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಅಕ್ರಮವಾಗಿ ಸಂಗ್ರಹ ಮಾಡಿರುವುದು ಕಂಡು ಬಂದಿದ್ದು 8 ನೂರು ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಕಾನ್ಸ್ಟೇಬಲ್ ರಮೇಶ್ ಎಂ, ಸುಂದ್ರಪ್ಪ ಎಂ.ಎನ್, ಪ್ರದೀಪಕುಮಾರ್ ಕೆ, ಸುಜನ್ ರಾಜ್ ಕೆ, ಯಶೋಧ, ಚಾಲಕ ಮಂಜು ಪ್ರಸಾದ್ ಉಪಸಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ತಾಲೂಕು ಹನೂರು, ಚಾಮರಾಜನಗರ ಜಿಲ್ಲೆ.