ತಿಂಥಣಿ ಬ್ರೀಜ್: ಇಲ್ಲಿನ ಶ್ರೀ ಕನಕ ಗುರು ಪೀಠದಲ್ಲಿ ಜನವರಿ 12 ,13 ಹಾಗೂ 14 ನೇ ತಾರೀಖಿನಂದು ಜರುಗಲಿರುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದ ಕರ ಪತ್ರಗಳನ್ನು ಕನಕಗುರು ಪೀಠದ ಶ್ರೀ ಸಿದ್ದರಾಮನಂದ ಸ್ವಾಮಿಗಳು ಬುಧವಾರ ಬಿಡುಗಡೆ ಮಾಡಿದರು. ಮೊದಲನೆ ದಿನ ಕುರಿಗಾರರ ಸಮಸ್ಯೆ, ಸೌಕರ್ಯ ಹಾಗೂ ಕುರಿಗಾರಿಕೆ ಒಂದು ಉದ್ಯಮ ಎಂಬ ಕುರಿತು ಸಮಾವೇಶ ನಡೆಯಲಿದೆ. ಎರಡನೇ ದಿನ ವಿವಿದ ಪ್ರಶಸ್ತಿ ಪ್ರದಾನ ಹಾಗೂ ನಾಲ್ಕನೆ ದಿನದಂದು ಯುವಜನ ಜಾಗೃತಿ ಸಮಾವೇಶ ನೆರವೇರಲಿದೆ ಎಂದು ಶ್ರೀ ಸಿದ್ದರಾಮನಂದ ಸ್ವಾಮಿ ತಿಳಿಸಿದರು. ಈ ಸದಂರ್ಭದಲ್ಲಿ ಕೊಪ್ಪಳ ಜಿಲ್ಲೆಯ ಬಾದಮಿನಾಳ ಶ್ರೀ ಶಿವಸಿದ್ದೇಶ್ವರ ಸ್ವಾಮಿ, ಶರಣಯ್ಯ ಒಡೆಯರ್, ಮಲ್ಲಣ್ಣ ದಂಡಿನ, ಕನಕ ನೌಕರರ ಸಂಘದ ಅಧ್ಯಕ್ಷ ನೀಲಪ್ಪ ಹೊಸಮನಿ, ಶಿವಾನಂದ ನರಹಟ್ಟಿ,ಮುಕ್ಕಣ್ಣ, ನಂದು ಪೂಜಾರ ಸೇರಿದಂತೆ ಇನ್ನಿತರರು ಇದ್ದರು.