ಇಂಡಿಯಲ್ಲಿ ದತ್ತಿ ಸ್ಮರಣೆ..! ಯಾವಾಗ..? ಎಲ್ಲಿ..?
ಇಂಡಿ : ಪಟ್ಟಣದಲ್ಲಿ ದತ್ತಿ ಸ್ಮರಣೆ ಕಾರ್ಯಕ್ರಮ ೨೦ ಅಗಸ್ಟ್ ರವಿವಾರದಂದು ಸಾಯಂಕಾಲ ೬ ಘಂಟೆಗೆ ಶ್ರೀ ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅವರು ತಿಳಿಸಿದ್ದಾರೆ.
ದತ್ತಿ ಸ್ಮರಣೆ ಲಿಂ|| ಸಂಗಮ್ಮ ಬಸೆಟೆಪ್ಪ ಸುರುಪೂರ (ಸಾತಿಹಾಳ) ಇದ್ದು, ದತ್ತಿ ದಾಸೋಹಿಗಳು ಪ್ರೊ ಐ.ಬಿ ಸುರಪೂರ ವಿಶ್ರಾಂತ ಪ್ರಾಚಾರ್ಯರು ವಹಿಸಿಕೊಂಡಿದ್ದಾರೆ.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಇಂಡಿ ಶಾಖೆ ಹಾಗೂ ಕದಳಿವೇದಿಕೆ, ಯುವ ಘಟಕ ಹಾಗೂ ಜಿ ಆರ್ ಜಿ ಕಲಾ ಮತ್ತು ವಾಯ್ ಎ ಪಾಟೀಲ ವಾಣಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಜರುಗುತ್ತದೆ.
ಅಧ್ಯಕ್ಷತೆ ಷ.ಬ್ರ ರೇಣುಕ ಶಿವಾಚಾರ್ಯರು, ಉಪನ್ಯಾಸಕರು ಸೋಮಶೇಖರ್ ಸುರಪೂರ, ಬಿ ಎಸ್ ಪಾಟೀಲ, ಆರ್ ವ್ಹಿ ಪಾಟೀಲ, ಗಂಗಾಬಾಯಿ ಗಲಗಲಿ, ಎಸ್ ಐ ಸೂಗೂರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗುತ್ತದೆ ಎಂದು ತಿಳಿಸಿದರು.