ಇಂಡಿ : ಯಾವ ವಿಧ್ಯಾರ್ಥಿ ಚನ್ನಾಗಿ, ನೀಟಾಗಿ ಅಚ್ಚುಕಟ್ಟಾಗಿ ಓದುತ್ತಾರೆಯೋ ಅವರಿಗೆ ಈ ನೆಲ, ಜಲ, ಭಾಷೆ ಗಗನ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಇಸ್ರೋ ವಿಜ್ಞಾನಿ ವಿಲಾಸ ತಾರು ರಾಠೋಡ ಹೇಳಿದರು.
ಇಂಡಿ ಪಟ್ಟಣದ ಪ್ರತಿಷ್ಠಿತ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜನೆಗೊಳಿಸಿರುವ ಸನ್ಮಾನ ಹಾಗೂ ಸ್ಪೇಸ್ ಆನ್ ಲೈನ್ ವ್ಹಿಲ್ ವಿಜ್ಞಾನ ಪ್ರದರ್ಶನ ಸಮಾರಂಭದಲ್ಲಿ ಪ್ರಸ್ತುತ ಚಂದ್ರಯಾನ -3 ಉಡಾವಣೆಯಲ್ಲಿ ಮುಖ್ಯ ಜವಬ್ದಾರಿವಹಿಸಿದ ಹಾಗೂ ಇಸ್ರೋ ವಿಜ್ಞಾನಿಯಾಗಿ ಮತ್ತು ಹಳೆಯ ವಿಧ್ಯಾರ್ಥಿಯಾಗಿ ಸನ್ಮಾನಿತರಾಗಿ ಮಾತಾನಾಡಿದರು.
ಇದೇ ಶಾಲೆಯಲ್ಲಿ 1988 ರ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಯಾಗಿ ಶಾಲೆ ಕಲಿತದ್ದು, ನನ್ನ ಸೌಭಾಗ್ಯ. ಆ ದಿನಗಳಲ್ಲಿ ಎರಡ ಅಕ್ಷರ ಇಂಗ್ಲೀಷ್ ಬಾರದ ನನಗೆ, ಶಿಕ್ಷಕರು ಅತೀ ಕಾಳಜಿವಹಿಸಿ ನನ್ನ ಕಲಿಕೆಯಲ್ಲಿ ಬದಲಾವಣೆ ತಂದಿದ್ದು ಅವರಿಗೆ ನಾನು ಚಿರರುಣಿ ಎಂದು ಹೇಳಿದರು. ಇನ್ನೂ ವಿಧ್ಯಾರ್ಥಿಗಳು ಬಹಳ ಓದಿದ್ರೆ ಮಾತ್ರ ವಿಜ್ಞಾನಿಯಾಗುತ್ತಾರೆ ಎಂಬುದು ತಪ್ಪು ಕಲ್ಪನೆ. ಯಾವುದೇ ವಿಷಯ ಓದುವಾಗ ಅಚ್ಚುಕಟ್ಟಾಗಿ ಶಿಸ್ತಿನಿಂದ ಓದಿದ್ರೆ ಸಾಕು, ನೀವು ಬಯಸಿದ್ದು ಯಶಸ್ವಿಯಾಗಿತ್ತೀರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ್ ಬಗಲಿ ಅವರು, ಬಂಥನಾಳ ಸ್ವಾಮಿಜಿಯವರ ಕೊಡುಗೆ, ಶ್ರೀ ಶಾಂತೇಶ್ವರ ಹೆಸರಲ್ಲಿ ಪ್ರಾರಂಭವಾದ ಚಿಕ್ಕ ಶಾಲೆಯು ಇಂದು ಹಲವಾರು ಕ್ಷೇತ್ರದ ಸಾಧನಗೈದ ಸಾಧಕರನ್ನ ಕಾಣುತ್ತಿದ್ದೆವೆ. ಇನ್ನೂ 75 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಕಲಿತ ಎಮ್ ಎಲ್ ಎ, ಎಮ್ ಪಿ ಹಾಗೂ ಡಾಕ್ಟರ್, ಇಂಜಿನಿಯರ್ ಹಾಗೂ ಇನ್ನೂ ಇತರೆ ಕ್ಷೇತ್ರದ ಎಲ್ಲಾ ಸಾಧಕರನ್ನ ಕರೆ ತಂದು ಸನ್ಮಾನಿಸುವ ಕಾರ್ಯ ಮಾಡುತ್ತೆವೆ ಎಂದು ಹೇಳಿದರು.
ಇಸ್ರೋ ವಿಜ್ಞಾನ ವಿಲಾಸ್ ರಾಠೋಡ ಅವರ ಧರ್ಮ ಪತ್ನಿ ಕಾಂಗ್ರೆಸ್ ಮುಖಂಡೆ ಕಾಂತಾ ನಾಯಕ ಮಾತಾನಾಡಿದ ಅವರು 25 ವರ್ಷ ಶಿಕ್ಷಣಕ್ಕಾಗಿ ಮೀಸಲಿಟ್ಟರೆ 75 ವರ್ಷದ ಜೀವನ ಸುಖದ ಸಂಪತ್ತಿನಲ್ಲಿ ಇರುತ್ತದೆ. ಪರೀಕ್ಷೆ ಗಾಗಿ ಓದೊದಕ್ಕಿಂತ ಜ್ಞಾನಕ್ಕೆ ಓದಿದವನು ಯಶಸ್ವಿಯಾಗುತ್ತಾನೆ. ವಿಧ್ಯಾರ್ಥಿ ಜೀವನ ಮತ್ತು ಸಮಯ ಬಹಳ ಮುಖ್ಯ, ಕಳೆದುಕೊಂಡು ಹುಡುಕಿದ್ರೆ ಸಿಗೋದು ಹಾಗಾಗಿ ಎಲ್ಲರೂ ಚೆನ್ನಾಗಿ ಓದಿ ನೀವು ಕೂಡಾ ಇಸ್ರೋ ಸಂಸ್ಥೆಯಲ್ಲಿ ಪಾಲ್ಗೊಂಡು ದೇಶೆ ಸೇವೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ|| ದೀಪಕ ದೋಶಿ, ಇಸ್ರೋ ವಿಜ್ಞಾನಿ ಎಚ್ ಎಲ್ ಶ್ರೀನಿವಾಸ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ, ಕ್ಷೇತ್ರ ಸಮನ್ವಾಧಿಕಾರಿ ಎಸ್ ಆರ್ ನಡಗಡ್ಡಿ, ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಕಾರ್ಯದರ್ಶಿ ಸಿದ್ದಣ್ಣ ಆರ್ ತಾಂಬೆ, ನಿರ್ದೇಶಕ ಸಚಿನಕುಮಾರ ಗಾಂಧಿ, ಸಾತಪ್ಪ ತೆನಹಳ್ಳಿ, ವರ್ಧನ ದೋಶಿ, ಚಂದ್ರಕಾಂತ ದೆವರ, ಅಜೀತ ಧನಶೆಟ್ಟಿ ಹಾಗೂ ಪ್ರಾಚಾರ್ಯರು ಬಿ. ಎನ್ ರಾಠೋಡ ಉಪಸ್ಥಿತರಿದ್ದರು. ನಿರೂಪಣೆ ಮುಖ್ಯ ಗುರುಗಳು ರಾಘವೇಂದ್ರ ಕುಲಕರ್ಣಿ ನೆರೆವರಿಸಿದರು.