ನಕಲಿ ವೈದ್ಯ ಹಾಗೂ ಸಮವಸ್ತ್ರ ಧರಿಸದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ..!
ಇಂಡಿ : ನಕಲಿ ವೈದ್ಯೆ ಹಾಗೂ ಸಮವಸ್ತ್ರ ಧರಿಸದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮೂಲಕ ತಾಲ್ಲೂಕು ಆರೋಗ್ಯ ಇಲಾಖೆ ಅವರಿಗೆ ಕರ್ನಾಟಕ ರಾಷ್ಟ್ರ ಸಮಿತಿಯ ತಾಲ್ಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಹೌದು ತಾಲ್ಲೂಕಿನಾದ್ಯಾಂತ ನಕಲಿ ವೈದ್ಯೆರ ಹಾಗೂ ಅಕ್ರಮ ಕ್ಲಿನಿಕ್ ಹಾವಳಿ ಹೆಚ್ಚಾಗಿದೆ. ಇವರ ಬೆಲ್ಲದ ಮಾತಿಗೆ ಗ್ರಾಮೀಣ ಭಾಗದ ಮುಗ್ದ ಜನರು ಮೊಸ ಹೋಗುವ, ಆರೋಗ್ಯ ಹಾನಿಯಾಗುವ ಸಾಧ್ಯತೆ ಹೆಚ್ಚು ಹಾಗಾಗಿ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅದಲ್ಲದೇ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರಕಾರಿ ಆಸ್ಪತ್ರೆಯಲ್ಲಿ ಸರಿಯಾದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸರಿಯಾದ ಸಮಯಕ್ಕೆ ಬಾರದ ವೈದ್ಯರ ನಿರ್ಲಕ್ಷ್ಯ. ಇನ್ನೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾತ್ರೆ, ಔಷಧಿ ದೊರೆಯದ ಕಷ್ಟಕರ ಪರಿಸ್ಥಿತಿ. ಸಂಪೂರ್ಣವಾಗಿ ಮಾತ್ರೆ ಔಷಧಿಗಳ ಕೊರತೆ ಇದೆ ಅಂತಾ ಹೇಳುತ್ತಾರೆ. ಇನ್ನೂ ದಿನದ 24*7 ಕಾರ್ಯ ನಿರ್ವಹಿಸ ಬೇಕಾದ ಆಸ್ಪತ್ರೆಗಳು ಸಮಯದ ಮತ್ತು ಇತರೆ ಮಾಹಿತಿ ಬಗ್ಗೆ ನಾಮ ಫಲಕ ಇರುವುದಿಲ್ಲ. ಜೊತೆಗೆ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳು ಗುರುತಿನ ಚೀಟಿಯಿಲ್ಲದೆ, ಸಮವಸ್ತ್ರ ಧರಿಸದೆ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೋರುತ್ತಾರೆ. ಇಂತಹ ಅವ್ಯವಸ್ಥಿತಯಲ್ಲಿರುವ ಆಸ್ಪತ್ರೆಗಳಿಗೆ ಆಡಳಿತ ವೈದ್ಯಅಧಿಕಾರಿ ಆದೇಶ ಮಾಡಿ ಸುಧಾರಣೆ ಮಾಡಬೇಕು ರಾಷ್ಟ್ರ ಪಕ್ಷದ ಸಮಿತಿಯ ಸೈನಿಕರು ಆಸ್ಪತ್ರೆ ಗೆ ಬೇಟಿ ನೀಡಿದಾಗ ಲೋಪದೋಷಗಳು ಅಥವಾ ಸಮಸ್ಯೆಗಳು ಕಂಡಾಗ ತಮ್ಮ ಗಮನಕ್ಕೆ ತರುತ್ತವೆ. ಅದಕ್ಕೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದ್ರೆ ತಮ್ಮ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಜಾಧವ ಕೆ ಆರ್ ಎಸ್ ಸಮಿತಿ, ತಾಲ್ಲೂಕು ಅಧ್ಯಕ್ಷ ಗಣಪತಿ ರಾಠೋಡ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಕಾರ್ಯದರ್ಶಿ ಲಕ್ಷ್ಮಣ ಚಡಚಣ ಹಾಗೂ ಕೆ ಆರ್ ಎಸ್ ಪಕ್ಷದ ಸೈನಿಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.