ಇಂಡಿ ತಾಲೂಕಿನ ಸ್ಥಿರಾಸ್ತಿಗಳ ಪರಿಷ್ಕೃತ ಪಟ್ಟಿ ಪ್ರಕಟ..
ಇಂಡಿ ಆ.17 ( ವೈಸ್ ಆಫ್ ಜನತಾ )
ಇಂಡಿ : ತಾಲೂಕಿನ ಸ್ಥಿರಾಸ್ತಿಗಳ ದರಪಟ್ಟ ಪರಿಷ್ಕರಿಸುವ ಮಾರ್ಗಸೂಚಿ,ಮಾರ್ಗದರ್ಶಿ ಪ್ರಕಾರ ಪರಿಷ್ಕರಿಸಿ, 2023-24ನೇ ಸಾಲಿನಲ್ಲಿ ಪರಿಷ್ಕೃತ ಪಟ್ಟಿಯನ್ನು ಆಗಸ್ಟ್ 10 ರಂದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಚೇರಿಯಲ್ಲಿ ಸಾರ್ವಜನಿಕ ಪ್ರಕಟಣೆಗಾಗಿ ಪ್ರಕಟಿಸಲಾಗಿದೆ.
ಸಾರ್ವಜನಿಕರು ಸಲಹೆ ಸೂಚನೆ ಹಾಗೂ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಪಟ್ಟಿ ಪ್ರಕಟಿಸಿದ 15 ದಿನದೊಳಗಾಗಿ ತಾಲೂಕಿನ ಉಪನೋಂದಣಿ ಅಧಿಕಾರಿಗಳು ಮತ್ತು ಸದಸ್ಯ ಕಾರ್ಯದರ್ಶಿಗಳು ಮಾರುಕಟ್ಟೆ ಮೌಲ್ಯ ನಿರ್ಧರಣಾ ಉಪ ಸಮಿತಿಗೆ ಸಲ್ಲಿಸಬಹುದಾಗಿದೆ ಎಂದು ಉಪ ನೋಂದಣಾಧಿಕಾರಿಗಳು ಇಂಡಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.