ದೇವರ ನಿಂಬರಗಿಯಲ್ಲಿ77ನೇ ಸ್ವಾತಂತ್ರ್ಯ ಸಂಭ್ರಮ..!
ಚಡಚಣ : ಬ್ರಿಟಿಷರ ಕಪಿಮುಷ್ಠಿ, ದಬ್ಬಾಳಿಕೆ, ದೌರ್ಜನ್ಯದಿಂದ ದೇಶ ಮುಕ್ತಿಗೊಂಡು ಇಂದಿಗೆ 77ನೇ ವರ್ಷಗಳು, ಈ ಹಿನ್ನೆಲೆಯಲ್ಲಿ, 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಮೃತ ಮಹೋತ್ಸವವನ್ನು ದೇಶಾದ್ಯಂತ ಐತಿಹಾಸಿಕ, ಸ್ಮರಣಾತ್ಮಕವಾಗಿ ಆಚರಿಸಲಾಗ್ತಿದೆ. ಪ್ರತಿ ಭಾರತೀಯನು ಹೆಮ್ಮೆಯಿಂದ ಸಂಭ್ರಮಿಸುವಂತಹ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಸ್ಮರಿಸುವ ದಿನ ಎಂದು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷ ಭೀಮನಗೌಡರ ಬಿರಾದಾರ ಹೇಳಿದರು.
ಚಡಚಣ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯತ್ ಆವರಣದಲ್ಲಿ 77ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತಾನಾಡಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಧಂದರಗಿ, ಬಸವರಾಜ್ ಬಿರಾದಾರ, ಅಲ್ಲಭಕ್ಷ ಬೋರಗಿ, ಚನ್ನು ವಡ್ಡರ, ಸಂತೋಷ್ ಧಂದರಗಿ, ಅಮಸಿದ್ದ ಕೊಟಿ, ಶ್ರೀಶೈಲಗೌಡ ಸಾಲೋಟಗಿ, ಚಾಂದಸಾಬ ಗುಳೇ ಕಾರ, ನಬಿಸಾಬ ಬಂಡಾರಕವಟೆ, ಸಿದ್ದಪ್ಪ. ಭೀ.ತೇಲಿ, ಮುಸ್ತಾಕ ಮುಲ್ಲಾ, ಚಂದ್ರಾಮ ಸಿಂಗೆ, ಹಾಜಿ ಮಕಾಂದಾರ, ಅಕಿಲ ಮಕಾಂದಾರ, ರಾಜು ಲವಗಿ, ರಾಜು ಲಾಳಸಂಗಿ, ರಾಜು ಕೆಂಗಾರ,ರಾಜಕುಮಾರ ಸಿಂಗೆ, ಸದಾಶಿವ ಸಿಂಗೆ, ಬೀರಪ್ಪ ಸಲಗರ ಗ್ರಾಮಸ್ಥರು ಇದ್ದರು.
ವರದಿ : ರಾಹುಲ್ ಕೆ, ಚಡಚಣ ತಾಲ್ಲೂಕು, ವಿಜಯಪುರ ಜಿಲ್ಲೆ