ರಾಜ್ಯ ಸಂಘಟನಾ ಸಂಚಲಕರಾಗಿ ಡಿ. ನಾರಯಾಣ್ ಆಯ್ಕೆ..
ದ.ಸಂಸ. ಭೀಮವಾದದ ಪದಾಧಿಕಾರಿಗಳ ಆಯ್ಕೆ..
ಬೆಳಗಾವಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ರಾಜ್ಯ ನೂತನ ಸಂಚಾಲಕರಾಗಿ ಎಂ.ನಾರಾಯಣ್ ಬುಧವಾರ ಆಯ್ಕೆಯಾದರು.
ಕುಂದಾನಗರಿಯಲ್ಲಿ ೯ ಅಗಸ್ಟ್ ರಂದು ಆಯೋಜಿಸಿರುವ ಬುದ್ದವಿಹಾರದಲ್ಲಿ ರಾಜ್ಯ ಮತ್ತು ಜಿಲ್ಲಾ ಹಂತದ ಪದಾಧಿಕಾರಿಗಳ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿತ್ತು. ರಾಜ್ಯ ಸಮಿತಿಯ ನಿಕಟಪೂರ್ವ
ಸಂಚಾಲಕರಾದ ಮತ್ತು ದ.ಸಂ.ಸ. ಭೀಮವಾದದ ಸ್ಥಾಪಕರಾದ ಆಯುಷ್ಮಾನ್ ಪರಶುರಾಮ್ ನೀಲನಾಯಕ್ ಅವರು, ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಶುರಾಮ್ ನೀಲನಾಯಕ್ ರವರು, ದ.ಸಂ.ಸ. ಸಂಘಟನೆಯ
ಹೋರಾಟಕ್ಕೆ ಹಲವಾರು ಕಾರ್ಯಕರ್ತರು ಬೆನ್ನುಲುಬಾಗಿ ದುಡಿದಿದ್ದಾರೆ. ಅದಕ್ಕೆ ನಾನೇ ನಾಯಕ, ನನ್ನಿಂದಲೇ ಸಂಘಟನೆ ಎಂಬುದು ಅವರ ವೈಯಕ್ತಿಕ ಬಲಹೀನತೆಯನ್ನೇ ಪ್ರಶ್ನಿಸುವಂತಿದೆ. ಪ್ರಸ್ತುತವಾಗಿ ಚಳುವಳಿಯ ಸಂಘಟನೆಗಳಿಗೆ ಒಬ್ಬರೇ ನಾಯಕರರಾಗದೇ, ಸಂವಿಧಾನದ ಬದ್ದವಾಗಿ, ನಾಯಕತ್ವ
ಹಂಚಿಕೆಯಾಗಬೇಕು. ಆ ಮೂಲಕ ಪ್ರಜಾಪ್ರಭುತ್ವದ ಹಾದಿಯಲ್ಲಿ ಚಳುವಳಿ ಸಾಗಬೇಕಿದೆ. ನಾವು ಯಾರ ಅಡಿಯಾಗದೇ, ಬಾಬಾ ಸಾಹೇಬರ ಮಾರ್ಗದಲ್ಲಿ ಮುನ್ನಡೆಯೋಣ ಎಂದು ಕರೆ ನೀಡಿದರು.
ದ.ಸಂಸ. ಭೀಮವಾದದ ಪದಾಧಿಕಾರಿಗಳ ಆಯ್ಕೆ:
ದ.ಸಂಸ. ಭೀಮವಾದದ ಮುಂದಿನ ಮೂರು ವರ್ಷಗಳವರೆಗೆ ಬೆಂಗಳೂರಿನ ದ.ಸಂ.ಸ. ಚಳುವಳಿಯಲ್ಲಿ ಸುಮಾರು ೨೫ ವರ್ಷಗಳಿಂದ ದುಡಿದ ಅನುಭವ ಇರುವ ಆಯುಷ್ಮಾನ್ ಎಂ.ಸಿ.ನಾರಾಯಣ್ ರವರನ್ನು ರಾಜ್ಯ ಸಂಚಾಲಕರನ್ನಾಗಿ ಎಲ್ಲ ರಾಜ್ಯ ಹಾಗೂ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಸಭೆಯಲ್ಲಿ ಒಕ್ಕೊರಲಿನಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಂ.ಸಿ.ನಾರಾಯಣ್ ಮಾತಾನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಭೀಮವಾದ ಸಂಘಟನೆಯ ಸಿದ್ದಾಂತಗಳನ್ನು ಒಪ್ಪಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಚಿಂತನೆಯ ಮಾರ್ಗದಲ್ಲಿ ಸಂಘಟಿಸುವ ಶೋಷಿತ ಸಮುದಾಯದ ದನಿಯಾಗಿ ಕಾರ್ಯನಿರ್ವಹಿಸುವ ಎಲ್ಲರಿಗೂ ಈ ಸಂಘಟನೆಯಲ್ಲಿ ಮುಕ್ತ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಂಘಟನೆಯನ್ನು ಬಲಗೊಳಿಸೋಣ. ರಾಜ್ಯದ, ದೇಶದ ಯಾವುದೇ ಪ್ರದೇಶದಲ್ಲಿ ಶೊಷಿತರ ದನಿಯಾಗಿ ಕಾರ್ಯನಿರ್ವಹಿಸಲು ಸನ್ನದರಾಗೋಣ, ಯಾವುದೇ ಸಂದರ್ಭದಲ್ಲಿ ನಿಮ್ಮೊಡನೆ ನಾನಿರುತ್ತೇನೆ. ಸಂಘಟನೆಗೆ ಶಕ್ತಿ ತುಂಬಲು ಒಗ್ಗಟಾಗಿ ಕಾರ್ಯಪ್ರವೃತ್ತರಾಗೋಣ ಎಂದರು.
ರಾಜ್ಯ ಮಹಿಳಾ ಒಕ್ಕೂಟದ ಸಂಘಟನಾ ಸಂಚಾಲಕಿಯರನ್ನಾಗಿ ಶ್ರೀಮತಿ ಸುಧಾರಾಣಿ, ಸವಿತಾ ಅಸೂದೆ ಹಾಗೂ ರಾಜ್ಯ ಮಹಿಳಾ ಒಕ್ಕೂಟದ ಸದಸ್ಯರನ್ನಾಗಿ ಪ್ರಿಯದರ್ಶಿನಿ ರವರನ್ನು ನೇಮಿಸಲಾಯಿತು.
ರಾಜ್ಯ ಸಮಿತಿಯ ಸಂಘಟನಾ ಸಂಚಾಲಕರುಗಳನ್ನಾಗಿ, ಸಂಜೀವ್ ಕಾಂಬ್ಳೆ, ನೌಕರರ ಒಕ್ಕೂಟದ
ಡಿ.ಸಿದ್ದರಾಜು, ಮತ್ತು ಬಿ.ಎನ್ ವೆಂಕಟೇಶ್, ಯಲ್ಲಪ್ಪ ಹಳೇಮನಿ, ಡಿ.ನಾರಾಯಣ್, ಎಂ.ಚಂದ್ರಶೇಖರ್,
ಶ್ಯಾಮ್ ಕಾಳೆ, ಓಂಕಾರಪ್ಪ ಕಪ್ಪಗಲ್ಲು, ರವರು, ಖಜಾಂಚಿ ಯನ್ನಾಗಿ ಕೆ.ನಾಗರಾಜು ರವರನ್ನು, ಆಯ್ಕೆ
ಮಾಡಲಾಯಿತು. ರಾಜ್ಯ ಸಮಿತಿಯ ಸದಸ್ಯರನ್ನಾಗಿ, ಕೆ.ಬೈರಪ್ಪ, ಹೆಚ್.ಮಂಜುನಾಥ್, ಸಿದ್ದಾರ್ಥ ಆರ್
ಸಿಂಘೆ, ಪಡಿಯಪ್ಪ ಕಳ್ಳೀಮನಿ, ಚಿದಾನಂದ ತಳಕೇರಿ, ಕೆ.ಕುಮಾರ್, ಜಯಶೀಲನ್, ಕೆಂಪಣ್ಣ ಶಿರಹಟ್ಟಿ
ರವರು ನೂತನವಾಗಿ ನೇಮಕಗೊಂಡರು.
ಬೆಳಗಾವಿ ವಿಭಾಗೀಯ ಸಂಚಾಲಕರನ್ನಾಗಿ,
ಕಲ್ಲಪ್ಪ ನಾಗಪ್ಪ ಚನ್ನವರ, ಬಿಜಾಪುರ ವಿಭಾಗಕ್ಕೆ ಸಂಚಾಲಕರನ್ನಾಗಿ ಯಮನಪ್ಪ ಗುಣಕಿ ರವರನ್ನು ನೇಮಿಸಲಾಯಿತು.
ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ..
ಸಂದರ್ಭದ ಈ ಸಭೆಯಲ್ಲಿ ದ.ಸಂ.ಸ.
ಪದಾಧಿಕಾರಿಳಾದ ಸಂಜೀವ್ ಕಾಂಬ್ಳೆ, ನೌಕರರ ಒಕ್ಕೂಟದ ಡಿ.ಸಿದ್ದರಾಜು, ಮತ್ತು ಬಿ.ಎನ್ ವೆಂಕಟೇಶ್,
ಯಲ್ಲಪ್ಪ ಹಳೇಮನಿ, ಡಿ.ನಾರಾಯಣ್, ಎಂ.ಚಂದ್ರಶೇಖರ್, ಶ್ಯಾಮ್ ಕಾಳೆ, ಓಂಕಾರಪ್ಪ ಕಪ್ಪಗಲ್ಲು, ಕೆ.ನಾಗರಾಜು, ಕೆ.ಬೈರಪ್ಪ, ಹೆಚ್.ಮಂಜುನಾಥ್, ಸಿದ್ದಾರ್ಥ ಆರ್ ಸಿಂಘೆ, ಪಡಿಯಪ್ಪ ಕಳ್ಳೀಮನಿ, ಚಿದಾನಂದ ತಳಕೇರಿ, ಕೆ.ಕುಮಾರ್, ಜಯಶೀಲನ್, ಕೆಂಪಣ್ಣ ಶಿರಹಟ್ಟಿ, ಕಲ್ಲಪ್ಪ ನಾಗಪ್ಪ ಚನ್ನವರ, ಯಮನಪ್ಪ ಗುಣಕಿ, ಶ್ರೀಮತಿ ಸುಧಾರಾಣಿ, ಸವಿತಾ ಅಸೂದೆ, ಪ್ರಿಯದರ್ಶಿನಿ, ಹಾಗೂ ರಾಜ್ಯದ ಎಲ್ಲ
ಜಿಲ್ಲೆಗಳ ಪಧಾದಿಕಾರಿಗಳು ಭಾಗವಹಿಸಿದ್ದರು.