ಲಿಂಗಸೂಗೂರು: ತಾಲೂಕಿನ ಮದಗಲ್ ಪಟ್ಟಣದ ಉಪ್ಪಾರ ಓಣಿಯ ಏಳನೇ ವಾರ್ಡಿನ ನಿವಾಸಿಗಳು ರಾಜ್ಯಾ ಹೆದ್ದಾರಿ ರಸ್ತೆ ತಡೆದು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ಹಳೆಯ ಚರಂಡಿಯಲ್ಲಿ ಕಾಲುವೆ ನೀರು ನಿಂತು ದುರ್ವಾಸನೆ ಬರುತ್ತಿದೆ. ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ನಿದಾನವಾಗಿ ಸಾಗುತ್ತಿದೆ. ಹಳೆಯ ಚರಂಡಿ ನೀರು ರಸ್ತೆಗಳಲ್ಲಿ ಹರಿದು ಮನೆಯೊಳಗೆ ನುಗ್ಗುತ್ತದೆ. ಆದ್ದರಿಂದ ತಕ್ಷಣ ಸಮರ್ಪಕ ಚರಂಡಿ ವ್ಯವಸ್ಥೆ, ರಸ್ತೆ ದುರಸ್ತಿ ಮಾಡಿಸಬೇಕೆಂದು ಒತ್ತಾಯಿಸಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲೆಂದರಲ್ಲಿ ಹರಿಯುತ್ತಿರುವ ಒಳಚರಂಡಿ ನೀರು ದುರ್ವಾಸನೆ ಬೀರುತ್ತಿರುವ ಪರಿಣಾಮ ಮುದಗಲ್ಲ ಉಪ್ಪಾರ ಓಣಿ ಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕಲುಷಿತ ನೀರು ಹರಿದು ಹೋಗಲು ಸಮರ್ಪಕವಾಗಿ ಒಳಚರಂಡಿ ನಿರ್ಮಾಣ ಮಾಡಿಲ್ಲ. ಹಳೆಯ ಕಾಲುವೆ ಚರಂಡಿ ತುಂಬಿ ದುರ್ವಾಸನೆ ಬೀರುತ್ತಿವೆ. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಅಲ್ಲದೆ ಸ್ವಚ್ಛತೆ ಮಾಡಲು ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ಮುದಗಲ್ಲ 7 ವಾರ್ಡಿನ ಜನರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ರಸ್ತೆ ಮತ್ತು ಸೂಕ್ತವಾಗಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆ ಮೇಲೆ ಹರಿಯುತ್ತದೆ. ಕಚ್ಚಾ ರಸ್ತೆಯ ಮೇಲೆ ಹರಿದು ಕಸ , ಪ್ಲಾಸ್ಟಿಕ್ , ತ್ಯಾಜ್ಯ ಸಂಗ್ರಹಗೊಂಡು ಗಬ್ಬೆದ್ದು ನಾರುತ್ತಿದೆ. ಕೊಳಚೆ ಪ್ರದೇಶದಿಂದ ಎಲ್ಲಾ ಕಡೆಯೂ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಆಯತಪ್ಪಿ ಹಲವುರು ಕೊಚ್ಚೆ ನೀರಿನಲ್ಲಿ ಬಿದ್ದ ಘಟನೆಗಳು ನಡೆದಿವೆ. ರಾಜ್ಯಾ ಹೆದ್ದಾರಿಯ ಮುಖ್ಯ ರಸ್ತೆಯು ಕೂಡ ಸಂಪೂರ್ಣವಾಗಿ ಹದಗೆಟ್ಟಿದೆ. ಮೊಣಕಾಲುದ್ದದಷ್ಟು ತಗ್ಗು ಬಿದ್ದಿದೆ. ಅದರಲ್ಲಿ ಕೂಡಾ ಒಳಚರಂಡಿ ನೀರು ನಿಂತುಕೊಂಡಿದೆ.
ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗತ್ತಿಗೆದಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ವೆಂದು ಪ್ರತಿಭಟನಾಕಾರರು ಆರೋಪಿಸಿದರು. ನಂತರ ಪೊಲೀಸ್ರು ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಿ ವಾಹನಗಳಿಗೆ ಪ್ರಯಾಣ ಮಾಡಲು ಅನುವುಮಾಡಿಕೊಟ್ಟರು.