ಇಂಡಿ : 2023 ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಇಂಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಗೆಲುವು ಸಾಧಿಸಲೆಂದು ತಾಲ್ಲೂಕಿನ ಬರಗುಡಿ ಗ್ರಾಮದ ಪಾಟೀಲ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮುಮ್ಮೆಟ್ಟಗುಡ್ಡಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಹರಕೆ ಹೊತ್ತಿದ್ದರು. ಅದರಂತೆ ಇಂಡಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಇಂಡಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಅರಕೇರಿ ಮುಮ್ಮಟಗುಡ್ಡದವರೆಗೆ ಸುಮಾರು 74 ಕಿ.ಮೀ ಪಾದಯಾತ್ರೆ ಮೂಲಕ ಮಲಕಾರಿಗೌಡ ಬಿರಾದಾರ, ಅಣ್ಣಾರಾಯಗೌಡ ಪಾಟೀಲ, ಪ್ರವೀಣಗೌಡ ಪಾಟೀಲ, ಕೇಶವಗೌಡ ಪಾಟೀಲ, ಸೋಮಲಿಂಗ್ ಬಿರಾದಾರ ಹಾಗೂ ಇತರೆ ಸ್ನೇಹಿತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಪಾಟೀಲ ಅಭಿಮಾನಿಗಳು ಮಾತಾನಾಡಿದ ಅವರು, ಬಹುತೇಕವಾಗಿ ಇಂಡಿ ತಾಲ್ಲೂಕು ನಂಜುಪ್ಪ ವರದಿಯಂತೆ ಸಂಪೂರ್ಣವಾಗಿ ಹಿಂದುಳಿದಿದೆ. ನಮ್ಮ ತಾಲ್ಲೂಕು ಸತತವಾಗಿ ಬರಗಾಲನಿಂದ ತತ್ತರಿಸಿದ್ದು, ನೀರಿಲ್ಲದೇ ಹಾಹಾಕಾರ ಅನುಭವಿಸಿದ್ದೆವೆ. ತಾಲ್ಲೂಕಿನ ಬದಲಾವಣೆಗಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ, ಶಾಂತಿ ಸಹಬಾಳ್ವೆಗಾಗಿ, ವಿಶಾಲ ಹೃದಯವಂತಿಕೆ ಹೊಂದಿದ ಶಾಸಕ ಯಶವಂತರಾಯಗೌಡ ಪಾಟೀಲ ಅತೀ ಅವಶ್ಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಸಹೋದರ ಬಸವಂತ್ರಾಯಗೌಡ ಪಾಟೀಲ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಪಾಟೀಲ್, ಸೋಮಲಿಂಗಗೌಡ ಪಾಟೀಲ, ಪಡನೂರ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸಂಜೀವ ಶೆಂಡಗಿ, ಗೋಪಾಲ ಅಂಕಲಗೀಕರ, ಸಿದ್ದು ದೇಸಾಯಿ, ಸದಾಗೌಡ ಬಿರಾದಾರ ಸೇರಿದಂತೆ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.