ಇಂಡಿ : ತಾಲೂಕಿನ ತಡವಲಗಾ ಗ್ರಾಮದ ನಮ್ಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಯೋಧ ದಯಾನಂದ ಹಿರೇಮಠ ನೆರೆವೆರಿಸಿದರು. ತದನಂತರ ಮಾತಾನಾಡಿ ನಾವು ಒದು , ಬರಹ ಕಲಿತು ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ನಡೆದುಕೊಂಡರೆ ಅದುವೇ ನಮ್ಮ ದೇಶಕ್ಕೆ ಕೊಡುಗೆಯಾಗುತ್ತೆ. ಇವತ್ತಿನ ಯುವಕರು ಕೆಟ್ಟ ಚಟಗಳಿಗೆ ಅಂಟಿಕೊಂಡು ಕುಟುಂಬಕ್ಕೆ, ಅಲ್ಲದೇ ಗ್ರಾಮಕ್ಕೆ ಮಾರಕವಾಗಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಗ್ರಾಮದ ಮುಖಂಡ ತಮ್ಮಣ್ಣ ಪೂಜಾರಿ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ದೇಶಪ್ರೇಮ, ರಾಷ್ಟ್ರೀಯ ಭಾವೈಕ್ಯತೆ ಮೂಡಿಸಿ ಭವ್ಯ ಭಾರತದ ಕನಸು ನನಸಾಗಿಸೋಣ ಎಂದು ಹೇಳಿದರು. ರಾಚೋಟೇಶ್ವರ ಶ್ರೀಗಳು ದಿವ್ಯಸಾನಿಧ್ಯ ವಹಿಸಿ ಮಕ್ಕಳಿಗೆ ಆಶಿರ್ವಚನ ನೀಡಿದರು. ಶಾಲಾ ವಿಧ್ಯಾರ್ಥಿಗಳಿಂದ ಹಲವು ಮನರಂಜನಾ ಮತ್ತು ದೇಶ ಭಕ್ತಿ ಕಾರ್ಯಕ್ರಮ ನಡೆದವು.
ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳು ಶ್ರೀ ಎನ್.ಎ . ತಳವಾರ , ಮುಖ್ಯ ಅತಿಥಿ ಶ್ರೀ ಕಲ್ಯಾಣಿ ಗಣವಲಗಾ , ರವಿ ಮಸಳಿ ,ಶರಣು ಕುಂಬಾರ, ಶಿಕ್ಷಕವೃಂಧ – ಮದ್ದು ಮಕ್ಕಳು ಉಪಸ್ಥಿತರು. ಸ್ವಾಗತ ಸಂತೋಷ ಬಿರಾದಾರ ,ನಿರೂಪಣೆ ಕು.ವಿದ್ಯಾರಾಣಿ ಮಿರ್ಜಿ, ಸಾಂಸ್ಕೃತಿಕ ಕಾರ್ಯಕ್ರಮ ಕು.ಪೂಜಾ ಗೊಳ್ಳಗಿ , ಶ್ರೀಮತಿ ಸುನಂದಾ ಸುಧಾಮ ವಂದಿಸಿದರು.