ಇಂಡಿ : ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮ ದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಮೀತಾ ಬಚ್ಚನ್ ನಡೆಸಿಕೊಡುವ ದೇಶದಲ್ಲಿಯೇ ಎಕೈಕ ವಿಶೇಷವಾಗಿರುವ ಕೌನ ಬನೇಗಾ ಕರೊಡಪತಿ ಕಾರ್ಯಕ್ರಮದಲ್ಲಿ ಸ್ಪರ್ಧಾರ್ಥಿಯಾಗಿ ಭಾಗವಹಿಸಿ ಜಿಲ್ಲೆಯ ಕಿರ್ತಿ ಹೆಚ್ಚಿಸಿದ ಜಾಹಿದಾ ಹುಂಡೇಕಾರ ಶಾಲಾ ಧ್ವಜಾರೋಹಣ ನೆರೆವೆರಿಸಿದರು. ತದನಂತರ ಮಾತಾನಾಡಿ , ಇಂದು ನಾವೆಲ್ಲರೂ ನಮ್ಮ ರಾಷ್ಟ್ರದ 73 ನೇ ಗಣರಾಜ್ಯೋತ್ಸವ ವನ್ನು ಆಚರಿಸುತ್ತಿದ್ದೇವೆ. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಎರಡೂವರೆ ವರ್ಷಗಳ ನಂತರ 1950 ನೇ ವರ್ಷದಿಂದಲೂ ಗಣರಾಜ್ಯೋತ್ಸವ ಅಂಗವಾಗಿ ಇಡೀ ದೇಶದ ತುಂಬೆಲ್ಲಾ ಬಾರಿ ಸಡಗರದಿಂದ ಆಚರಣೆ ಮಾಡಲಾಗುತ್ತೆ ಎಂದು ಹೇಳಿದರು. ನಾವು ಇದನ್ನು ಪ್ರತಿ ವರ್ಷ ಜನವರಿ 26 ರಂದು ಆಚರಿಸುತ್ತೇವೆ ಏಕೆಂದರೆ ಈ ದಿನದಂದು ಭಾರತದ ಸಂವಿಧಾನವು ಅಸ್ತಿತ್ವಕ್ಕೆ ಬಂದಿತು. ಭಾರತದ ಪ್ರಜೆಗಳನ್ನು ಆಳುವ -ಶಾಸಕಾಂಗ, ನ್ಯಾಯ ಒದಗಿಸುವ – ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸ ಮಾಡುವ ಕಾರ್ಯಾಂಗಗಳು ಹೇಗಿರಬೇಕು? ಯಾವೆಲ್ಲ ನೀತಿ ನಿಯಮಗಳನ್ನು ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲಾ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ ಸಂವಿಧಾನ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ರೂಗಿ ಅವರು ಮಾತನಾಡಿ, ಕೊವಿಡ್ ಮಹಾ ಮಾರಕ ರೋಗ ಇಡೀ ದೇಶವೇ ತಲ್ಲಣಗೊಳಿಸಿ ಮಾನವ ಸಮುದಾಯಕ್ಕೆ ದೊಡ್ಡ ಕಂಟಕವಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಮಟ್ಟ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಬಗ್ಗೆ ಪಾಲಕರು ಕೂಡಾ ಮನೆಯಲ್ಲಿ ಪಾಠ ಬೋಧನೆ ಯೊಂದಿಗೆ ಮಕ್ಕಳಿಗೆ ಮನೋ ಸ್ಥೈರ್ಯ ಮೂಡಿಸಬೇಕು. ಇಂದು ಶಾಲೆಗೆ ಆಗಮಿಸಿದ ಮುಖ್ಯ ಅತಿಥಿಗಳತ್ತ್ ನೋಡಿದರೆ ನಿಮ್ಮಲ್ಲರಿಗೂ ಅಪಾರವಾದ ಸಂತೋಷ ವಾಗುತ್ತೆ. ರಾಜ್ಯದಲ್ಲಿಯೇ ಹಿಂದುಳಿದ ಕಟ್ಟ ಕಡೆಯ ತಾಲೂಕು ನಮ್ಮ ದಾಗಿದೆ.ಅದರಲ್ಲೂ ಅನೇಕ ಅಪಸ್ವರದಲ್ಲಿ ಮುಳಗಿದೆ. ಇಂತಹ ಒಂದು ಸಂದರ್ಭದಲ್ಲಿ ಜಾಹಿರ ಹುಂಡೆಕಾರ ಅವರು ರಾಷ್ಟ್ರ ಮಟ್ಟದ ಕೌನ ಬನೇಗಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಜಿಲ್ಲೆ, ತಾಲೂಕಿಗೆ ಮಾದರಿಯಾಗಿದ್ದಾರೆ. ಇದಕೆಲ್ಲಾ ಕಾರಣ ಅವರ ಸಂಕಲ್ಪ ಎಂದರು. ಶಾಲಾ ವಿಧ್ಯಾರ್ಥಿಗಳು ತಾವು ಈಗಿನಿಂದಲೇ ಒಳ್ಳೆಯ ಸಂಕಲ್ಪ ಮಾಡಿ ನಿಮ್ಮ ಕುಟುಂಬಕ್ಕೆ ನಿಮ್ಮೂರಿಗೆ,ನಿಮ್ಮ ನಾಡಿಗೆ ಕಿರ್ತಿ ತರಬೇಕೆಂದು ಹೇಳಿದರು.
ಅತಿಥಿಯಾಗಿ ರೈತ ಮುಖಂಡ ಗುರಪ್ಪ ಅಗಸರ್, ಗ್ರಾಮ ಪಂಚಾಯತ್ ಸದಸ್ಯ ಭೀಮರಾಯ ಜೇವೂರ್ ,ಪತ್ರಕರ್ತ ಎಸ್.ಬಿ. ಜಮಾದಾರ್, ಸಂಜು ರೂಗಿ, ಬಾಳಪ್ಪ ತಳವಾರ್, ಜಟ್ಟೆಪ್ಪ ಮೂಲಿಮನಿ ಹಾಗೂ ಪಾಲಕರು ಉಪಸ್ಥಿತರು.
ನಿರೂಪಣೆ ಕುಮಾರಿ ಶೃತಿ ಅರ್ಜುಣಗಿ, ವಂದನಾರ್ಪಣೆ ಕುಮಾರಿ ವಾಣಿಶ್ರೀ ರೂಗಿ, ಗುರುಮಾತೆಯರು ನೆರವೇರಿಸಿಕೊಟ್ಟರು