ರಾಯಚೂರು : ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡ 3 ರಿಂದ ಶೇಕಡ 7.5 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಸಮಿತಿಯ ಜಿಲ್ಲಾದ್ಯಕ್ಷೆ ಡಾ.ಶಾರದ ಪಿ ಹುಲಿನಾಯಕ್ ಒತ್ತಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಘೋಷ್ಠಿಯಲ್ಲಿ ಅವರು ಮಾತನಾಡುತ್ತ 1956 ರಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಮೀಸಲಾತಿಯು ಶೇಕಡ 3 ರಷ್ಟಿದ್ದ ವೇಳೆ ಪಟ್ಟಿಯಲ್ಲಿ ಕೇವಲ 6 ಜಾತಿಗಳು ಮಾತ್ರ ಇದ್ದವು. ನಂತರ 1991 ರ ಎಪ್ರಿಲ್ 19 ರಂದು ವಾಲ್ಮೀಕಿ, ನಾಯ್ಕ, ನಾಯಕ್, ಬೇಡ ಮತ್ತು ಬೇಡರ ಪದಗಳನ್ನು ಪರಿಶಿಷ್ಟ ಪಂಗಡದ ಪಟ್ಟಗೆ ಸೇರಿಸಲಾಯಿತು. ಆದರೆ, ಈ ಪಂಗಡಗಳು ಈ ಹಿಂದೆ ಪ್ರವರ್ಗ-1 ರಲ್ಲ ಪಡೆಯುತ್ತಿದ್ದ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಲ್ಲಾ. ಇದರಿಂದ 1991 ರಿಂದ ಇಲ್ಲಯವರಿಗೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಈಗಿರುವ ಒಟ್ಟು 51 ಜಾತಿಗಳಿಗೆ ಕೇವಲ ಶೇಕಡ 3 ರ ಮೀಸಲಾತಿ ದೊರೆಯುತ್ತಿದೆ.
ಕೇಂದ್ರ ಸರಕಾರವು ಲೋಕ ಸಭಾ ಮತ್ತು ವಿಧಾನ ಸಭಾ ಕ್ಷೇತ್ರ ಮನರ್‌ವಿಂಗಡನೆಗಾಗಿ ನೇಮಿಸಿದ ನ್ಯಾಯಮೂರ್ತಿ ಕುಲದೀಪ ಸಿಂಗ್ ಆಯೋಗವು ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರಿಗೆ ಶೇಕಡ 7.5 ರ ಪ್ರಮಾಣದಲ್ಲಿ ರಾಜಕೀಯ ಮೀಸಲಾತಿಯನ್ನು ನೀಡಿದೆ. ಅದರಂತೆ ರಾಜ್ಯ ಸರಕಾರವು ಪರಿಶಿಷ್ಟ ಪಂಗಡದವರಿಗೆ ಎಸ್.ಟಿ.ಪಿ ಯೋಜನೆಗಳಿಗೆ ಶೇಕಡ 7.5 ರ ಪ್ರಮಾಣದಲ್ಲಿ ಅನುದಾನವನ್ನು ಬಿಡುಗಡೆ ಗೊಳಿಸುತ್ತಿದೆ.
ಆದರೆ, ರಾಜ್ಯ ಸರಕಾರವು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 3 ರ ಮೀಸಲಾತಿಯನ್ನು ಮುಂದುವರೆಸಿ ಕೊಂಡು ಬಂದಿದೆ. ಇದರಿಂದ ನಮ್ಮ ಬುಡಕಟ್ಟು ಜನಾಂಗ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅತೀ ಹಿಂದುಳಿದಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲಾ. 2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಪಂಗಡದವರ ಒಟ್ಟು ಜನಸಂಖ್ಯೆ ಶೇಕಡ 6.95 ರಷ್ಟಿದೆ. ಆದರೆ ದೊರೆಯುತ್ತಿರುವ ಮೀಸಲಾತಿ ಕೇವಲ ಶೇಕಡ 3 ಮಾತ್ರ. ಆದ್ದರಿಂದ, 2019 ರ ಜೂನ್ 9 ನೇ ತಾರೀುನಿಂದ ನಮ್ಮ ಮಹರ್ಷಿ ವಾಲ್ಮೀಕಿ ಗುರು ಪೀಠದ ಜಗದ್ಗುರುಗಳಾದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಮೀಸಲಾತಿ ಹೆಚ್ಚಳಕ್ಕಾಗಿ ರಾಜನ ಹಳ್ಳಿಯಿಂದ ರಾಜಧಾನಿ ಬೆಂಗಳೂರಿನವರೆಗೆ 360 ಕಿ.ಮೀ. ಪಾದ ಯಾತ್ರೆ ಮಾಡಿ ಜೂನ್ 25, 2019 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿ ಕೊಂಡಿದ್ದರು.
ಇದರಿಂದ ಆಗಿನ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಯವರ ಸರಕಾರ ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ್ ರವರ ಆಯೋಗವನ್ನು ನೇಮಕ ಮಾಡಿತು. ತದ ನಂತರ ಮುಖ್ಯ ಮಂತ್ರಿಯಾದ ಶ್ರೀ ಬಿ.ಎಸ್.ಯಡಿಯೂರಪ್ಪ ನವರು 2020 ರ ಫೆಬ್ರವರಿ 9 ರಂದು ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲ ಆಯೋಗದ ವರದಿ ಬಂದ ತಕ್ಷಣ ಮೀಸಲಾತಿ ಪ್ರಮಾಣ ಹೆಚ್ಚಿಸುವುದಾಗಿ ಭರವಸೆ ನೀಡಿದರು. ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ್ ರವರ ಆಯೋಗವು 2020 ರ ಜುಲೈ ಕೊಟ್ಟು ಸರಕಾರ ಕಾಲಹರಣ ಮಾಡುತ್ತಿದೆ.
ವಾಲ್ಮಿಕಿ ಸಮುದಾಯದ ಜಗದ್ಗುರುಗಳಾದ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಫೇ.10 ರಿಂದ ಬೆಂಗಳೂರಿನ ಪ್ರಿಡಮ್ ಪಾರ್ಕಿನಲ್ಲ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ. ಕಳೆದ ೮ ದಿನಗಳಿಂದ ಉಪವಾಸ ಸತ್ಯಾಗ್ರಹ ಕುಳಿತಿದ್ದು ಅವರ ಆರೋಗ್ಯದಲ್ಲಿ ಏರು ಪೇರಾದರೆ ಈಗಿನ ಸರಕಾರವೇ ಅದಕ್ಕೆ ಜವಾಬ್ದಾರಿಯಾಗುತ್ತದೆ. ಒಂದು ವೇಳೆ ಸ್ವಾಮೀಜಿಗಳು ಹೋರಾಟಕ್ಕಾಗಿ ಕರೆ ಕೊಟ್ಟಲ್ಲ ರಾಜ್ಯದಲ್ಲಿರುವ ವಾಲ್ಮೀಕಿ ನಾಯಕ ಸಮುದಾಯದ 70 ರಿಂದ 80 ಲಕ್ಷ ಜನರು ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ. ಆದ್ದರಿಂದ, ಮಾನ್ಯ ಮುಖ್ಯ ಮಂತ್ರಿಗಳು ಕೂಡಲೇ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡ 3 ರಿಂದ ಶೇಕಡ 7.5 ಕ್ಕೆ ಹೆಚ್ಚಿಸ ಬೇಕು ಮತ್ತು ಈ ಬುಡಕಟ್ಟು ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ದೊರೆಯ ಬೇಕಾದ ಸಾಮಾಜಿಕ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.