ವಿಜಯಪುರ : ಶುಗರ್ ಫ್ಯಾಕ್ಟರಿ ಪರವಾನಿಗೆ ಕೊಡಿಸುವಾಗಿ ಹೇಳಿ 6 ಕೋಟಿ 2 ಲಕ್ಷ ರೂಪಾಯಿ ವಂಚನೆಗೈದ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರದ ಆದರ್ಶ ನಗರದ ಆಶ್ರಮ ರಸ್ತೆಯ ವ್ಯಾಪಾರಿ ಅಜೀತಕುಮಾರ ಬಾಳಾಸಾಹೇಬ ಕುಚನೂರ ಎಂಬುವರು ಮೋಸಕ್ಕೆ ಒಳಗಾಗಿದ್ದಾರೆ.
ಬಳ್ಳಾರಿಯ ಬಿ.ವೀರಭದ್ರಪ್ಪ, ಈತನ ಪತ್ನಿ ಬಿ. ಕವಿತಾ ಹಾಗೂ ಇತರರು ಕೂಡಿಕೊಂಡು ಹಣ ಪಡೆಯುವ ದುರುದ್ಧೇಶದಿಂದ ಶುಗರ್ ಫ್ಯಾಕ್ಟರಿ ಪರವಾನಿಗೆ ಕೊಡಿಸುವುದಾಗಿ ಸುಳ್ಳು ಹೇಳಿ ಬೇರೆ ಬೇರೆ ಅಧಿಕಾರಿಗಳಂತೆ ನಟಿಸಿ ವಂಚನೆಗೈದಿದ್ದಾರೆ. ಅದಕ್ಕಾಗಿ ಅಜೀತಕುಮಾರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.