ಭೀಮಾತೀರ : 6 ಜನ ಬ್ಯಾಂಕ್ ಕಳ್ಳರ ಬಂಧನ : ಎಸ್ಪಿ ಋಷಿಕೇಸ್
ವಿಜಯಪುರ : ಬ್ಯಾಂಕ್ ಕಳ್ಳತನ ಮಾಡಿದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಹೇಳಿದರು. ವಿಜಯಪುರ ಜಿಲ್ಲೆಯ ಝಳಕಿ ಪೊಲೀಸ ಠಾಣಾ ಆವರಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಧೂಳಖೇಡ ಗ್ರಾಮದಲ್ಲಿರುವ ಭೀಮಾಶಂಕರ ಸಹಕಾರಿ ಬ್ಯಾಂಕ್ ಕಳ್ಳತನ ಮಾಡಿದ ಮಲ್ಲಿಕಾರ್ಜುನ ಹೊನಮಾನೆ, ಲತೀಫ್ ಮಕಾನದಾರ, ಮಾಳಪ್ಪ ಸಲಗರೆ, ನಿತೇಶ ನೀಲವಣಿ, ಹುಲಗಪ್ಪ ಪಾತ್ರೋಟ, ಅಬ್ದುಲ್ ಚೀನಿ ಬಂಧಿಸಲಾಗಿದೆ. ಅಲ್ಲದೇ, ಹಣ ಹಾಗೂ ಕೃತ್ಯಕ್ಕೆ ಬಳಿಸದ ವಾಹನ ಸೇರಿ 27 ಲಕ್ಷದ 15 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದರು. ಆರೋಪಿಗಳ ವಿರುದ್ಧ ಬಾಗಲಕೋಟ, ಗದಗ, ಕೊಪ್ಪಳ, ಬೆಳಗಾವಿಯಲ್ಲಿ ಕೇಸ್ಗಳಿವೆ ಎಂದು ಮಾಹಿತಿ ತಿಳಿಸಿದರು.