ರಾಯಚೂರು: ಇದು ಐವತ್ತು ರೂಪಾಯಿ ನೋಟು. ಇದು ನಕಲಿ ನೋಟು ಅಲ್ಲ, ಭಾರತೀಯ ರಿಜರ್ವ್ ಬ್ಯಾಂಕಿನಿಂದ ಅಧಿಕೃತ ಮಾನ್ಯತೆ ಹೊಂದಿದ ನೋಟಾಗಿದೆ.
ಮತ್ತೇ ಇದರಲ್ಲಿ ಏನು ವಿಶೇಷತೆ ಎನ್ನುವ ಕಾರಣಕ್ಕೆ ಇಲ್ಲಿ ಸುದ್ದಿಯಾಗಿದೆ?. ಸಾಮಾನ್ಯವಾಗಿ ಒಂದು ನೋಟಿನ ಬಗ್ಗೆ ಸುದ್ದಿ ಮಾಡುವಾಗ ಹೆಚ್ಚಾಗಿ ನಕಲಿ ನೋಟುಗಳ ಬಗ್ಗೆಯೇ ಪ್ರಸ್ತಾಪಿಸಲಾಗುತ್ತದೆ. ಆದರೆ, ಈ ೫೦ ರೂಪಾಯಿ ನೋಟು ಅಧಿಕೃತವಾಗಿದ್ದರೂ, ಸುದ್ದಿಯಾಗುವ ಮಹತ್ವ ಪಡೆದುಕೊಂಡಿದೆ. ಈ ೫೦ ರೂಪಾಯಿ ರಾಯಚೂರು ನೋಟು ಎನ್ನುವುದು ಇದರ ವಿಶೇಷತೆಯಾಗಿದೆ. ನಿಲ್ಲಿ… ನಿಲ್ಲಿ…
ರಾಯಚೂರು ನೋಟು ಎಂದರೇ, ಇದನ್ನು ರಾಯಚೂರಿನಲ್ಲಿ ಮುದ್ರಿಸಿಲ್ಲ. ಇದು ಎಲ್ಲಾ ನೋಟುಗಳಂತೆ ಭಾರತೀಯ ರಿಜರ್ವ್ ಬ್ಯಾಂಕ್ ಅಧೀನದಲ್ಲಿರುವ ಮುದ್ರಾಣಾಲಯದಲ್ಲೇ ಮುದ್ರಿತವಾಗಿದೆ. ಆದರೂ, ರಾಯಚೂರು ನೋಟು ಆಗಲು ಕಾರಣವೇನು? ಎನ್ನುವುದೇ ಇಲ್ಲಿಯ ಗಮನಾರ್ಹ ಸಂಗತಿಯಾಗಿದೆ. ನೋಟು ಅಧಿಕೃತ ಎನ್ನುವ ಹಲವು ಅಂಶಗಳಲ್ಲಿ ಈ ನೋಟಿನ ಮೇಲೆ ಮುದ್ರಿತಗೊಂಡ ಸಂಖ್ಯೆಯೂ ಅಷ್ಟೆ ಪ್ರಮುಖವಾಗಿದೆ. ಈ ೫೦ ರೂ. ನೋಟು ಸುದ್ದಿಯಾಗಲು ಈ ಸಂಖ್ಯೆಯೇ ಪ್ರಮುಖ ಕಾರಣವಾಗಿದೆ. ಕಾರಣ ರಾಯಚೂರಿನ ಪಿನ್ ನಂಬರ್ ಈ ನೋಟಿನ ಮೇಲೆ ಇರುವುದು.
ರಾಯಚೂರು ಪಿನ್ ನಂಬರ್ ೫೮೪೧೦೩ ಇದೇ ಸಂಖ್ಯೆಯನ್ನು ಈ ೫೦ ರೂಪಾಯಿ ನೋಟು ಹೊಂದಿರುವುದು ಗಮನಾರ್ಹವಾಗಿದೆ. ಇದನ್ನು ತೆಲಂಗಾಣ ರಾಜ್ಯದ ಜಹೀರಾಬಾದ್ ನಿವಾಸಿ ಸಂತೋಷಿ ಎಂಬುವವರು ಈ ನೋಟನ್ನು ಕಳುಹಿಸಿದ್ದಾರೆ.



















