VOJ ನ್ಯೂಸ್ ಡೆಸ್ಕ್: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಇತ್ತೀಚೆಗಷ್ಟೆ 25 ವರ್ಷದ ಮೇಘನಾರನ್ನು 45 ವರ್ಷದ ಶಂಕ್ರಣ್ಣ ಮದುವೆಯಾಗಿದ್ದರು. ಮದುವೆಯಾಗಿದ್ದ ಜೋಡಿಯ ಫೊಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡಾ ಆಗಿದ್ದವು. ಆದರೆ ರಾತ್ರಿ ಮನೆಯಿಂದ ಹೋದ ಶಂಕ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆಯಾದ ಐದೇ ತಿಂಗಳಲ್ಲಿ ಶಂಕ್ರಣ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಣಿಗಲ್ ತಾಲೂಕಿನ ಅಕ್ಕಿ ಮರಿಪಾಳ್ಯದಲ್ಲಿ ಶಂಕ್ರಣ್ಣ ಹಾಗೂ ಮೇಘನಾ ಮದುವೆಯಾಗಿದ್ದರು. ನಂತರ ಗ್ರಾಮದಲ್ಲಿದ್ದ ತಮ್ಮ ಜಮೀನನ್ನು ಮಾರಿ ಸಿಟಿಯಲ್ಲಿ ಜೀವನ ನಡೆಸೋಣ ಎಂದು ಮೇಘಾನ ಹಠ ಹಿಡಿದಿದ್ದಾಳೆ. ಇದೇ ವಿಚಾರಕ್ಕೆ ದಂಪತಿಗಳ ಮಧ್ಯೆ ಪದೇಪದೆ ಗಲಾಟೆಯಾಗುತ್ತಿತ್ತು. ನೆನ್ನೆ ಕೋಪದಿಂದ ಮನೆ ಬಿಟ್ಟು ಹೋಗಿದ್ದ ಶಂಕರಣ್ಣ ತಮ್ಮ ತೋಟದ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾರೆ. ಇನ್ನು ಮೇಘನಾಗೆ ಮೊದಲೇ ಬೇರೆಯವರ ಜೊತೆ ವಿವಾಹವಾಗಿತ್ತು. ಆದರೆ ಪತಿ ಮನೆ ಬಿಟ್ಟು ಓಡಿ ಹೋಗಿದ್ದ ಎನ್ನಲಾಗುತ್ತಿದೆ. ಸುಖ ಸಂಸಾರ ನಡೆಸಿ ಬಾಳಿ ಬದುಕಬೇಕಿದ್ದ ಶಂಕ್ರಣ್ಣ ಬಾರದ ಲೋಕಕ್ಕೆ ತೆರಳಿದ್ದಾರೆ.