Assembly Election Results 2023: 4 ರಾಜ್ಯಗಳ ವಿಧಾನಸಭಾ ಫಲಿತಾಂಶ..! ಯಾವ ರಾಜ್ಯಗಳು ಎಷ್ಟು ಗಂಟೆಗೆ ಗೊತ್ತಾ..?
Voice Of Janata DesK News : Political News :
Assembly Election Results 2023: ಈ ನಾಲ್ಕು ರಾಜ್ಯಗಳ ವಿಧಾನಸಭಾ ಫಲಿತಾಂಶ ಲೋಕಸಭಾ ದಿಕ್ಸೂಚಿ ಮುನ್ನಡಿ ಎಂದು ಹೇಳಲಾಗುತ್ತಿದೆ. ಹಾಗಾದರೆ ಯಾವ ರಾಜ್ಯಗಳು ಮತ್ತು ಚುನಾವಣೆ ಫಲಿತಾಂಶ ಎಷ್ಟು ಗಂಟೆಗೆ ನಡೆಯುತ್ತದೆ ಎಂಬ ಕೂತುಹಲ ಮತ್ತು ಉತ್ಸಾಹ ಹೆಚ್ಚುತ್ತಿದೆ ಅಲ್ವಾ..! ನೋಡಿ
ತೆಲಂಗಾಣ, ಛತ್ತೀಸ್‌ಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚಚುನಾವಣಾ ಫಲಿತಾಂಶವು ಡಿಸೆಂಬರ್ 3ರ ಭಾನುವಾರವಾದ ಇಂದು ಪ್ರಕಟವಾಗಲಿದೆ. ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಮತಗಳ ಎಣಿಕೆಯು ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮೊದಲು ಮತಪತ್ರಗಳನ್ನು ಎಣಿಸಲಾಗುತ್ತದೆ.
ತೆಲಂಗಾಣ, ಛತ್ತೀಸ್‌ಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನುಡಿ ಬರೆಯಲಿರುವ ಈ ಫಲಿತಾಂಶಗಳು, ಮುಖ್ಯವಾಗಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಆರ್‌ಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದರೆ, ಛತ್ತೀಸ್‌ಗಡದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.
ಮತಎಣಿಕೆ ಎಷ್ಟು ಗಂಟೆಗೆ ಆರಂಭ ಗೊತ್ತೆ..?
ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಆ ನಂತರ ಎಲೆಕ್ಟ್ರಾನಿಕ್ ಯಂತ್ರಗಳ ಮತ (ಇವಿಎಂ) ಎಣಿಕೆ ಆರಂಭವಾಗಲಿದೆ. ಮತದಾನ ನಡೆದ ದಿನದಿಂದ ಹಿಡಿದು ಈವರೆಗೆ ಇವಿಎಂಗಳನ್ನು ಇಟ್ಟಿರುವ ಸ್ಟ್ರಾಂಗ್ ರೂಂಗಳಿಗೆ ಬಿಗಿ ಭದ್ರತೆಯನ್ನು ಒದಸಲಾಗಿದೆ.
Assembly : ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಒಟ್ಟು 639 ಸ್ಥಾನಗಳಿಗೆ ಸುಮಾರು 11.9 ಕೋಟಿ ಮತಗಳು ಚಲಾವಣೆಯಾಗಿವೆ. 2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಚುನಾವಣೆಯು ಸೆಮಿಫೈನಲ್ ಪಂದ್ಯದ ಜೋಶ್ ಪಡೆದುಕೊಂಡಿದೆ . ಈ ಫಲಿತಾಂಶಗಳು ಲೋಕಸಭೆ ಚುನಾವಣೆಯಲ್ಲೂ ಪಕ್ಷಗಳ ಚುನಾವಣಾ ಕಾರ್ಯತಂತ್ರದ ಮೇಲೆ ಪರಿಣಾಮ ಬೀರಲಿವೆ.