Voice Of Janata DesK Sports News : ಮೊದಲಿನ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಪಾರ್ಲ್‌ನ ಬೊಲೆಂಡ್ ಪಾರ್ಕ್‌ನಲ್ಲಿ ನಡೆಯುವ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ತೀವ್ರ ಆಸಕ್ತಿಯನ್ನು ಕೆರಳಿಸಿದೆ.
ಮೊದಲನೇ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳಿಂದ ಗೆಲುವು ಪಡೆದಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೂಡ 8 ವಿಕೆಟ್‌ಗಳಿಂದ ಗೆದ್ದು ಸೇಡು ತೀರಿಸಿಕೊಂಡಿತ್ತು. ಇದೀಗ ಮೂರನೇ ಪಂದ್ಯ ಗೆದ್ದು ಏಕದಿನ ಸರಣಿಯನ್ನು ಮುಡಿಗೇರಿಸಿಕೊಳ್ಳಲು ಎರಡೂ ತಂಡಗಳು ಎದುರು ನೋಡುತ್ತಿವೆ. ಆದರೆ, ಭಾರತ ತಂಡದಲ್ಲಿ ಬಹುತೇಕ ಕಿರಿಯ ಆಟಗಾರರೇ ಇರುವ ಕಾರಣ ಪಾರ್ಲ್‌ನಲ್ಲಿ ಕೆಎಲ್ ರಾಹುಲ್ ಪಡೆಗೆ ಸಂಗತಿಗಳು ಕಠಿಣವಾಗಬಹುದು.
3 ನೇ ಒಡಿಐ ಪಂದ್ಯಕ್ಕೆ ಭಾರತದ ಸಂಭಾವ್ಯ ಆಟಗಾರರು
ಋತುರಾಜ್ ಗಾಯಕ್ವಾಡ್/ ರಜತ್ ಪಾಟಿದಾರ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ), ಕೆಎಲ್ ರಾಹುಲ್ (ನಾಯಕ), ರಿಂಕು ಸಿಂಗ್, ಅಕ್ಷರ್ ಪಟೇಲ್/ ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲ್ದೀಪ್ ಯಾದವ್/ ಯುಜ್ವೇಂದ್ರ ಚಹಲ್, ಮುಖೇಶ್ ಕುಮಾರ್/ ಆಕಾಶ್ ದೀಪ್
3 ನೇ ಒಡಿಐ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡಕ್ಕೆ ಸಂಭಾವ್ಯ ಆಟಗಾರರು
ಟೋನಿ ಡಿ ಜಾರ್ಜಿ, ರೀಝಾ ಹೆಂಡ್ರಿಕ್ಸ್, ರಾಸಿ ವ್ಯಾನ್ ಡೆರ್ ಡುಸೆನ್/ಕೈಲ್ ವೆರೆನ್, ಏಡೆನ್ ಮಾರ್ಕ್ರಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿ.ಕೀ), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್/ಮಿಹ್ಲಾಲಿ ಎಂ ಪಂಗ್ವಾನ, ಕೇಶವ್ ಮಹಾರಾಜ್, ನಂಡ್ರೆ ಬರ್ಗರ್, ಲಿಝಾದ್ ವಿಲಿಯಮ್ಸನ್/ಒಟ್ಟಿನೀಲ್ ಬಾರ್ಟಮನ್, ಬೀರನ್ ಹೆಂಡ್ರಿಕ್ಸ್
ಭಾರತ vs ದಕ್ಷಿಣ ಆಫ್ರಿಕಾ
ಮೂರನೇ ಏಕದಿನ ಪಂದ್ಯ
ದಿನಾಂಕ: ಡಿ.21, 2023
ಸಮಯ: ಸಂಜೆ 4: 30ಕ್ಕೆ ಆರಂಭ (ಭಾರತೀಯ ಕಾಲಮಾನ
ಸ್ಥಳ: ಬೊಲೆಂಡ್ ಪಾರ್ಕ್, ಪಾರ್ಲ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್