ಮಾಜಿ ಸಚಿವ ದಿ.ಎಂ.ಸಿ ಮನಗೂಳಿ 3ನೇ ಪುಣ್ಯಸ್ಮರಣೆ
ಸಿಂದಗಿ: ಆಧುನಿಕ ಭಗೀರಥ, ಶಿಕ್ಷಣ ಪ್ರೇಮಿ, ಮಾಜಿ ಸಚಿವ ದಿ.ಎಂ.ಸಿ ಮನಗೂಳಿ ಅವರ 3ನೆಯ ಪುಣ್ಯಸ್ಮರಣೆಯನ್ನು ಪಟ್ಟಣದ ಎಚ್.ಜಿ.ಹೈಸ್ಕೂಲ್ ಆವರಣದಲ್ಲಿ ಜ.28 ಭಾನುವಾರದಂದು ಬೆಳಿಗ್ಗೆ ಕುಟುಂಬದವರು ಆಯೋಜನೆ ಮಾಡಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಜನತೆ ಹಾಗೂ ದಿ.ಎಂ.ಸಿ ಮನಗೂಳಿ ಅವರ ಅಭಿಮಾನಿ ಬಳಗ, ಪಕ್ಷದ ಕಾರ್ಯಕರ್ತರು, ಮುಖಂಡರು, ರೈತರು, ಮಹಿಳೆಯರು, ವಿವಿಧ ಸಂಘಡನೆಯ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರು, ಯುವಕರು ದಿ.ಎಂ.ಸಿ ಮನಗೂಳಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿ ಆತ್ಮಕ್ಕೆ ಶಾಂತಿ ಕೋರಿದರು.
ಅದಲ್ಲದೇ ಅವರು ಮಾಡಿರುವ ಇತಿಹಾಸ ಸೃಷ್ಟಿಸುವಂತ ಕಾರ್ಯ ಮತ್ತು ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪನೆ ನಡೆಯುತ್ತಿತ್ತು. ಗುತ್ತಿ ಬಸವಣ್ಣ ಏತ ನೀರಾವರಿ, ಪಟ್ಟಣದಲ್ಲಿ ಕುಡಿಯುವ ನೀರಿನ,
ಅಲಮೇಲ ಪಟ್ಟಣವನ್ನು ತಾಲೂಕು ಕೇಂದ್ರವಾಗಿ, ಸಿಂದಗಿಯಲ್ಲಿ ಮಿನಿ ವಿಧಾನ ಸೌಧ ,ಒಳಚರಂಡಿ (ಡ್ರೈನೇಜ್) ತಮ್ಮ ಮತ ಕ್ಷೇತ್ರದಲ್ಲಿ ಬರುವ ಪ್ರತಿ ಹಳ್ಳಿಗಳಿಗೆ ಸಿಸಿ ರಸ್ತೆ ಕಡಣಿ ಗ್ರಾಮದಲ್ಲಿ ಕೆಇಬಿ ಹೀಗೆ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಪ್ರಶಂಸೆ ಮಾಡುತ್ತಿದ್ದರು. ಅವರ ಕಾರ್ಯಗಳು ಮಾರೆಯಲಾರ ದಂತಹವುಗಳು, ಅವರಂತೆಯೇ ಅವರ ಪುತ್ರ ಶಾಸಕ ಅಶೋಕ ಮನಗೂಳಿ ತಂದೆಯ ಆಸೆಯಂತೆ ಜನ ಸೇವೆಯನ್ನು ಮಾಡುತ್ತಿದ್ದಾರೆ. ಇನ್ನೂ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಶುಚಿ ರುಚಿಯಾದ ಊಟದ(ಪ್ರಸಾದ)ವೆವಸ್ಥೆ ಬಹಳ ಅಚ್ಚುಕಟ್ಟಾಗಿ ಮಾಡಲಾಗಿತ್ತು.
ವರದಿ : ಬಸವರಾಜ ಪಡಶೆಟ್ಟಿ ಆಲಮೇಲ ತಾಲೂಕು ವಿಜಯಪುರ ಜಿಲ್ಲೆ.