ವಿಜಯಪುರ : ನಾನು ನಾಡ ದೊರೆ ಅಲ್ಲ. ನನಗೆ ನಾಡ ದೊರೆ ಎನ್ನಬೇಡಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದರು. ವಿಜಯಪುರ ನಗರದ ಕಂದಗಲ್ ಹಣಮಂತರಾಯ್ ರಂಗಮಂದಿರದಲ್ಲಿ ಶನಿವಾರ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾಡದೊರೆ ಎಂದರೆ ನನಗೆ ಮುಜುಗರ, ಇರಿಸುಮುರುಸಾಗುತ್ತದೆ. ಅದಕ್ಕಾಗಿ ನಾಡದೊರೆ ಎನ್ನುವುದಕ್ಕೆ ಬ್ರೇಕ್ ಹಾಕಿ ಎಂದರು.
ಅಲ್ಲದೇ, ಒಂದು ಕೆಲಸ ಬೇಡ ಎಂದ್ರೆ ಹಲವು ಕಾರಣಗಳು ಇರುತ್ತವೆ. ಆದರೆ ಜನ್ರಿಗೆ ಒಳ್ಳೇದಾಗುತ್ತೆ ಎಂದ್ರೆ ಆ ಕೆಲಸ ಮಾಡಬೇಕು. ಪತ್ರಕರ್ತರು ಪ್ರಾದೇಶಿಕ ಪತ್ರಕರ್ತರು ಆಗಬಾರದು. ಅಖಂಡ ಕರ್ನಾಟಕದ ಪತ್ರಕರ್ತರು ಆಗಬೇಕು. ಎಲ್ಲ ಭಾಗ ಅಭಿವೃದ್ಧಿ ಆಗಬೇಕು ಎಂದ್ರೆ ಎಲ್ಲರೂ ಸಮಗ್ರ ಕರ್ನಾಟಕದ ಬಗ್ಗೆ ಮಾತನಾಡಬೇಕು. ಪತ್ರಕರ್ತರು ಹಾಗೂ ರಾಜಕಾರಣಿಗಳು ಅವಿನಾಭಾವ ಸಂಬಂಧ ಇದೆ. ನಮ್ಮನ್ನ ಬಿಟ್ಟು ನೀವು, ನಿಮ್ಮನ್ನ ಬಿಟ್ಟು ನಾವು ಇರೋಕಾಗಲ್ಲ. ಪತ್ರಿಕೆ ಇರದಿದ್ರೆ ನಮ್ಮನ್ನ ಯಾರೂ ಕೇಳ್ತಿರಲಿಲ್ಲ.
ನಮ್ಮ ವ್ಯಕ್ತಿತ್ವವನ್ನು ರೂಪಿಸುವುದು ಪತ್ರಿಕೆಗಳು ಆಗಿವೆ. ಅದಕ್ಕಾಗಿ ರಾಜಕಾರಣಿಗಳು ಇರದಿದ್ರೆ ಪತ್ರಿಕೆಯಲ್ಲಿ ಬರೀ ಸ್ಪೋರ್ಟ್ ಸುದ್ದಿ ಬರಿಬೇಕಿತ್ತು. ಈಗ ಫ್ರಂಟ ಪೇಜ್ ನಲ್ಲಿ ರಾಜಕಾರಣದ ಸುದ್ದಿ ಇರುತ್ತದೆ. ಹಾಗಾಗಿ ರಾಜಕಾರಣ, ಪತ್ರಿಕೋದ್ಯಮ ಆರೋಗ್ಯಕರ ಸಂಭಂದ ಇರಬೇಕು ಎಂದರು. ಇನ್ನೂ ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಕೊಡಬೇಕು ಎಂಬುದು ಕೇಳಿದ್ದೀರಿ. ಖಂಡಿತವಾಗಿ ನಾನು ಒಪ್ಪಿಕೊಳ್ತೆನೆ. ಸಂಘದಿಂದ ಸರ್ಟಿಫೈಡ್ ಮಾಡಿ ಸರಿಯಾದ ರೀತಿಯಲ್ಲಿ ಕೊಟ್ಟರೆ ನಾನು ಬಜೆಟ್ನಲ್ಲಿ ಅನುದಾನ ನೀಡಿ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.